ಕರ್ನಾಟಕದ ಸಂಸ್ಕೃತಿ

All Kaggas

Showing 945 Kaggas of 945

Kagga 1

ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ । ದೇವ ಸರ್ವೇಶ ಪರಬೊಮ್ಮನೆಂದು ಜನಂ ॥ ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ । ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ॥ ೧ ॥

Sri Vishnu vishvadi mula mayalola । Deva sarvesha parabommanendu janam ॥ Avudanu kanadodamaltiyim nambihudo । A vichitrake namiso - Mankutimma ॥ 1 ॥

DevotionLife+1
Kagga 2

ಜೀವ ಜಡರೂಪ ಪ್ರಪಂಚವನದಾವುದೋ। ಆವರಿಸಿಕೊಂಡುಮೊಳನೆರೆದುಮಿಹುದಂತೆ॥ ಭಾವಕೊಳಪಡದಂತೆ ಅಳತೆಗಳವಡದಂತೆ। ಆ ವಿಶೇಷಕೆ ನಮಿಸೊ - ಮಂಕುತಿಮ್ಮ ॥ ೨ ॥

Jeeva jadaroopa prapanchavanadavudo । Avarisikondum olaneredum ihudante ॥ Bhavakolapandante alategalavadadante । A visheshake namiso - Mankutimma ॥ 2 ॥

DevotionLife+1
Kagga 3

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ। ಮಹಿಮೆಯಿಂ ಜಗವಾಗಿ ಜೀವವೇಷದಲಿ ॥ ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ । ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ ॥ ೩ ॥

ihudo illavo tiLiyagoDadondu vastu nija । mahimeyim jagavAgi jIvavEShadali ॥ viharipudadu oLLiteMbudu nisadavAdoDA । gahana tattvake sharaNo - Mankutimma ॥ 3 ॥

Life
Kagga 4

ಏನು ಜೀವನದರ್ಥ? ಏನು ಪ್ರಪಂಚಾರ್ಥ? । ಏನು ಜೀವಪ್ರಪಂಚಗಳ ಸಂಬಂಧ? ॥ ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? । ಜ್ಞಾನಪ್ರಮಾಣವೇಂ? - ಮಂಕುತಿಮ್ಮ ॥ ೪ ॥

Enu jIvanadartha? Enu prapanchArtha? । Enu jIva prapanchagaLa sambandha? ॥ kANadilli irpudu enAnum unte? adEnu? । jnAna pramANavEm? - Mankutimma ॥ 4 ॥

WisdomLife
Kagga 5

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥ ಕಾವನೊರ್ವನಿರಲ್ಕೆ ಜಗದ ಕಥಯೇಕಿಂತು? । ಸಾವು ಹುಟ್ಟುಗಳೆನು? - ಮಂಕುತಿಮ್ಮ ॥ ೫ ॥

dEvarembudadEnu kaggattaleya gaviye? । nAvu ariyalArada elladara oTTu hesare? ॥ kAvanu orvanu iralke jagada kathe Eke intu? । sAvu huTTugaLenu? - Mankutimma ॥ 5 ॥

DevotionWisdom+3
Kagga 6

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? । ಬಗೆದು ಬಿಡಿಸುವರಾರು ಸೊಜಿಗವನಿದನು? ॥ ಜಗವ ನಿರವಿಸಿದ ಕೈಯೊದಾದೊಡೇಕಿಂತು । ಬಗೆಬಗೆಯ ಜೀವಗತಿ? - ಮಂಕುತಿಮ್ಮ ॥ ೬ ॥

ogaTe Enu E sRuShTi? bALina arthavadu Enu? । bagedu biDisuvarAru sojigavanu idanu? ॥ jagava niravisida kai odAdoDe Ekintu । bagebageya jIvagati? - Mankutimma ॥ 6 ॥

LifeMorality
Kagga 7

ಬದುಕಿಗಾರ್ ನಾಯಕರು, ಏಕನೊ ಅನೇಕರೋ? । ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ॥ ಕುದುರುವುದೆಂತು ಈಯವ್ಯವಸ್ಥ್ರೆಯ ಪಾಡು? । ಅದಿಗುದಿಯೆ ಗತಿಯೇನೋ? - ಮಂಕುತಿಮ್ಮ ॥ ೭ ॥

badukigAr nAyakaru, EkanO anEkarO? । vidhiyo pauroshavo dharumavo andhabalavO? ॥ kuduruvudentu eeya avyavasteya pADu? । adigudiye gatiyEnO? - Mankutimma ॥ 7 ॥

DevotionLife+4
Kagga 8

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? । ಭ್ರಮಿಪುದೇನಾಗಾಗ ಕರ್ತೃವಿನ ಮನಸು? ॥ ಮಮತೆಯುಳ್ಳವನಾತನಾದೊಡೀ ಜೀವಗಳು । ಶ್ರಮಪಡುವುವೇಕಿಂತು? - ಮಂಕುತಿಮ್ಮ ॥ ೮ ॥

kramavondu lakshyavondu sRuShTiyali? । bhramipudenu AgAga kartRuvina manasu? ॥ mamate uLLavanu AtanAdoDe ee jIvagaLu । shramapaDuvuvu Ekintu? - Mankutimma ॥ 8 ॥

Life
Kagga 9

ಏನು ಭೈರವಲೀಲೆಯೀ ವಿಶ್ವವಿಭ್ರಮಣೆ । ಏನು ಭೂತಗ್ರಾಮನರ್ತನೊನ್ಮಾದ ॥ ಏನಗ್ನಿ ಗೋಳಗಳು! ಏನಂತರಾಳಗಳು! । ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ ॥ ೯ ॥

Enu bhairava lIle ee vishvavibhramaNe । Enu bhUta grAma nartana unmAda ॥ Enagni gOLagaLu! Enu antarALagaLu! । Enu vismaya sRuShTi! - Mankutimma ॥ 9 ॥

DevotionLife+5
Kagga 10

ಏನು ಪ್ರಪಂಚವಿದು! ಏನು ಧಾಳಾಧಾಳಿ!। ಏನದ್ಭುತಾಪಾರಶಕ್ತಿನಿರ್ಘಾತ! ॥ ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?। ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥

Enu prapanchavidu! Enu dhALAdhALi!। Enadbhuta apAra shaktinirghAta! ॥ mAnavana guriyEnu? beleyEnu? mugivEnu? । Enarthavu idakella? - Mankutimma ॥ 10 ॥

LifeDeath
Kagga 11

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ । ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥ ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ । ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ ॥ ೧೧ ॥

muttiruvudindu bhUmiyanondu durdaiva । mRutyu kuNiyutalihanu kEkehAkutali ॥ suttipudu taleyanu anudinada lOkada vArte । ettalu idakella kaDe? - Mankutimma ॥ 11 ॥

LifeDeath+1
Kagga 12

ಮಾನವರೋ ದಾನವರೋ ಭೂಮಾತೆಯ ತಣಿಸೆ । ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥ ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ । ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ॥ ೧೨ ॥

mAnavarO dAnavarO bhUmAteya taNise । shoNitavanu ereyuvaru bAShpa saluvudire? ॥ Enu hage! Enu dhage! Enu hoge! yee dharaNi । saunikana kaTTeyEm? - Mankutimma ॥ 12 ॥

NatureSociety+1
Kagga 13

ಪುರುಷಸ್ವತಂತ್ರೆಯ ಪರಮಸಿದ್ಧಿಯದೇನು? । ಧರಣಿಗನುದಿನದ ರಕ್ತಾಭಿಷೇಚನೆಯೆ? ॥ ಕರವಾಲವನು ಪುಷ್ಪಸರವೆಂದು ಸೆಳೆದಾಡೆ । ಪರಿಮಳವ ಸೂಸುವುದೆ? - ಮಂಕುತಿಮ್ಮ ॥ ೧೩ ॥

puruSha svatantreya paramasiddhi adEnu? । dharaNige anudinada rakta abhiShEchaneye? ॥ karavAlavanu puShpasaravendu seLedADe । parimaLava sUsuvude? - Mankutimma ॥ 13 ॥

NatureWar
Kagga 14

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು । ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ॥ ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು । ಬಂದುದೀ ವೈಷಮ್ಯ? - ಮಂಕುತಿಮ್ಮ ॥ ೧೪ ॥

onde gaganava kANuta onde nelavanu tuLiyuta । onde dhAnyavanu uNNuta onde nIru kuDidu ॥ onde gALiyanu usirva narajAtiyoLage entu । bandudI vaiShamya? - Mankutimma ॥ 14 ॥

LifeMorality+2
Kagga 15

ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ । ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ॥ ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ । ತಳಮಳಿಸುತಿದೆ ಲೋಕ - ಮಂಕುತಿಮ್ಮ ॥ ೧೫ ॥

haLeya bhakti shraddhe aLisi hOgive mAsi । suLidu illa Ava hosa darshanada hoLapum ॥ paLagidda mane bidda kunTa kuruDana teradi । taLamaLisutide lOka - Mankutimma ॥ 15 ॥

DevotionLife+1
Kagga 16

ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ । ವಲೆವಂತೆ ಲೋಕ ತಲ್ಲಣಿಸುತಿಹುದಿಂದು ॥ ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ ತಳಮಳಕೆ ಕಡೆಯೆಂದೊ? - ಮಂಕುತಿಮ್ಮ ॥ ೧೬ ॥

iLeya biTTannu mettalumaidada prEta । valevante lOka tallaNisuta ihudu indu ॥ haLedharma sattihudu hosadharma huTTilla । taLamaLake kaDeyendo? - Mankutimma ॥ 16 ॥

DevotionLife+4
Kagga 17

ತಳಮವಿದೇನಿಳೆಗೆ? ದೇವದನುಜರ್ಮಥಿಸೆ । ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? ॥ ಹಾಳಾಹಳಾವ ಕುಡಿವ ಗಿರಿಶನಿದ್ದಿರ್ದೊಡೀ । ಕಳವಳವದೇತಕೆಲೋ? - ಮಂಕುತಿಮ್ಮ ॥ ೧೭ ॥

taLamavu idEnu iLege? dEvadanujar mathise । jaLanidhiyoLAdante sudhege pIThikeyEm? ॥ hALAhaLava kuDiva girishanu iddirdoDe ee । kaLAvaLAvadu EtakelO? - Mankutimma ॥ 17 ॥

DevotionLife+4
Kagga 18

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ । ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ॥ ಬದುಕೇನು ಸಾವೇನು ಸೊದೆಯೇನು ವಿಷವೇನು? । ಉದಕಬುದ್ಬುದವೆಲ್ಲ! - ಮಂಕುತಿಮ್ಮ ॥ ೧೮ ॥

nadiya tereyavol uruLi horaLutiruvudu jIva । modalilla mugivilla niluvillavadake ॥ badukEnu sAvEnu sodeyEnu viShavEnu? udakabudbudavella! - Mankutimma ॥ 18 ॥

LifeDeath+2
Kagga 19

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು । ಆಳೆನಿಪುದಂತಾಗದಿರೆ ಬರಿಯ ಹೆಂಟೆ ॥ ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ । ಕ್ಷೇಳವೇನಮೃತವೇಂ - ಮಂಕುತಿಮ್ಮ ॥ ೧೯ ॥

gALi maNNuDeya oLahokku horahoraLadu । ALenipudante Agadire bariya henTe ॥ bALEnu dhULu suLi, mara tikkiduriya hoge । kSELavEn amRutavEm - Mankutimma ॥ 19 ॥

LifeMorality+4
Kagga 20

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? । ಚಂಡಚತುರೋಪಾಯದಿಂದಲೇನಹೊದು? ॥ ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು । ಅಂಡಲೆತವಿದಕೇನೊ? - ಮಂಕುತಿಮ್ಮ ॥ ೨೦ ॥

kanDa daivakkella kaiya mugidEnahudu? । chanDachatura upAyadindalEnahudu? ॥ tandulada hiDiyondu tunDu baTTeyadondu । anDaletavidakEno? - Mankutimma ॥ 20 ॥

DevotionMorality
1 of 48