Mankutimmana Kagga by D.V. Gundappa
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ । ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ॥ ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ । ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ ॥ ೯೮ ॥
vakra Ruju mishra jagavu adara shOdhane dharma । prAkRuta dhvani mishravu adaraDuge rAga ॥ vyAkRutadina avyAkRuta Adi sattvake ninna । jAgRutipa mati dharma - Mankutimma ॥ 98 ॥
ಅಂಕು ಡೊ೦ಕುಗಳ, ನೇರ ಸೊಟ್ಟಗಳ, ಸುಳ್ಳು ಸತ್ಯಗಳ, ಕೇಡು ಲೇಸುಗಳ ಬೆರಕೆಯೇ ನಮ್ಮ ಈ ಲೋಕ. ಇವುಗಳನ್ನು ಪರೀಕ್ಷಿಸಿ, ಶೋಧಿಸಿ ನೋಡಿದಾಗ ನಮಗೆ ಅರಿವಾಗುವುದು ಲೋಕ ಧರ್ಮ. ಸಂಸ್ಕಾರವಿಲ್ಲದ ಒರಟು ಯೋಚನೆ, ರಾಗಾದಿಗಳನ್ನು ಸುಸಂಕೃತಗೊಳಿಸಿ ಒಂದು ವ್ಯವಸ್ಥೆಯನ್ನು ನಿರ್ಮಾಣಮಾಡಿ, ಶುದ್ಧವಾದ ಸತ್ಯದ ಅರಿವನ್ನು ಮೂಡಿಸುವುದೇ, ಎಚ್ಚರಗೊಳಿಸುವುದೇ ಧರ್ಮ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.
This world is a mixture of things that are straight and crooked. To search for the truth is Dharma - our duty. Just like when different kinds of sound mixed well gives out music - such different kinds of things are required in this world to make it beautiful. This wisdom which leads us to the ultimate unified truth from all the fractured truth is called Dharma. - Mankutimma
Video Coming Soon
Detailed video explanations by scholars and experts will be available soon.