Mankutimmana Kagga by D.V. Gundappa
ಧರ್ಮವೆಂಬುದದೇನು? ಕರ್ಮವೆಂಬುದದೇನು? । ಬ್ರಹ್ಮಾಂಡಕಥೆಯೇನು? ಜೀವಿತವಿದೇನು? ॥ ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ । ಬ್ರಹ್ಮವೇ ಜೀವನವೊ - ಮಂಕುತಿಮ್ಮ ॥ ೯೭ ॥
dharmavembudadEnu? karmavembudadEnu? । brahmAnDakatheyEnu? jIvitavidEnu? ॥ brahmavu ellaku mUla mAye tat kRuti jAla । brahmavE jIvanavo - Mankutimma ॥ 97 ॥
ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಈ ಬ್ರಹ್ಮ ಎಂಬುದು ಏನು? ಕರ್ಮ ಎಂಬುದು ಏನು? ಈ ಬ್ರಹ್ಮಾಂಡದ ಕಥೆ ಏನು ? ನಮ್ಮ ಜೀವನವು ಏನು ? ಈ ಜೀವನವು ಜಗತೀಗೆಲ್ಲಕ್ಕೂ ಮೂಲವಾದ ಆ ಬ್ರಹ್ಮನ ಕ್ರಿಯೆಯಾದಂತ ಒಂದು ಮಾಯಾಜಾಲವೋ? ಆದರೆ ಬ್ರಹ್ಮನೇ ಜೀವನವೋ? ಎಂದು ಒಂದು ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಾರೆ.
What is Dharma? What is Karma? What is the story of this universe? What is life? The Supreme being is the cause of every thing. This world is an illusion created by him. He is the life in all of us. - Mankutimma.
Video Coming Soon
Detailed video explanations by scholars and experts will be available soon.