Mankutimmana Kagga by D.V. Gundappa
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ । ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ॥ ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ । ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ॥ ೯೬ ॥
satyavembudadEnu brahmAnDa tAnDavadi । nRutyave satyavala kaDalaleya bALoL ॥ mithyeyembude mithye; jIvanATaka satya । kRutyavidu bommanadu - Mankutimma ॥ 96 ॥
ಇಡೀ ಬ್ರಹ್ಮಾಂಡದ ಶಾಂತ ಮತ್ತು ರುದ್ರ ತಾಂಡವದಿ, ಸತ್ಯ ಎಂಬುದು ಆವುದು. ನಮಗೆ ನಾವು ನಡೆಸುವ ಕಡಲ ಅಲೆಯಂಥಾ ಜೀವನವೇ ಸತ್ಯವಲ್ಲವೇ? ಮಿಥ್ಯೆ ಎಂಬುದು ಇಲ್ಲವೇ ಇಲ್ಲ ಈ ಜೀವನದ ನಾಟಕದಲ್ಲಿ. ಇದೆಲ್ಲವೂ ಆ ಪರಬ್ರಹ್ಮನಾಡುವ ಜಗನ್ನಾಟಕವೆನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
What is the truth in this world run by the cosmic dance? What we think as truth is not the real or complete truth in this life that behaves like waves at the ocean - temporary, but endless. If we say everything is a lie/illusion, then we open the door for that hypothesis to be false also. All we can confirm as truth is that "we are alive at this moment". The whole show is choreographed by the Creator. - Mankutimma
Video Coming Soon
Detailed video explanations by scholars and experts will be available soon.