Back to List

Kagga 945 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ । ಶರಣು ಜೀವನವ ಸಮವೆನಿಪ ಯತ್ನದಲಿ ॥ ಶರಣಂತರಾತ್ಮ ಗಂಭೀರಪ್ರಶಾಂತಿಯಲಿ । ಶರಣು ವಿಶ್ವಾತ್ಮದಲಿ - ಮಂಕುತಿಮ್ಮ ॥ ೯೪೫ ॥

sharaNuvogu jIvana rahasyadali sattvadali। sharaNu jIvanava samavenipa yatnadali ॥ sharaNu antarAtma gambhIra prashaantiyali । sharaNu vishvAtmadali - Mankutimma ॥ 945 ॥

Meaning in Kannada

ಜೀವನದ ಸತ್ವದ ರಹಸ್ಯಕ್ಕೆ ನೀನು ಶರಣಾಗು. ಈ ಜೀವನವನ್ನು ಹೂವಂತೆ ಸುಂದರವಾಗಿಸುವ ಪ್ರಯತ್ನಕ್ಕೆ ಶರಣಾಗು. ಅಂತರಂಗದ ಪ್ರಶಾಂತತೆಯಲ್ಲಿ ಗಂಭೀರವಾಗಿ ಪರತತ್ವಕ್ಕೆ ಶರಣಾಗು. ಜಗತ್ತಿನಲ್ಲಿರುವ ವಿಶ್ವಾತ್ಮಭಾವಕ್ಕೆ ಶರಣಾಗು ಎಂದು ನಾವು ನಮ್ಮ ನಮ್ಮ ಜೀವನಗಳಲ್ಲಿ ಅಂತಿಮವಾಗಿ ಸಾಧಿಸಿಬೇಕಾದ ಸ್ಥಿತಿಯನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Surrender (pursue) the mystery of life. Surrender to the truth behind it. Surrender to the constant hope and effort to make life endurable. Surrender to the inner self that is calm and serious. Surrender to the Cosmic spirit of the universe. - Mankutimma

Themes

WisdomLifeDeathNatureSelfPeace

Video Section

Video Coming Soon

Detailed video explanations by scholars and experts will be available soon.