Back to List

Kagga 944 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ । ಹೊಮ್ಮುಗೌದಾರ್ಯ ಜನಜನಪದಂಗಳಲಿ ॥ ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ । ನೆಮ್ಮದಿಯ ಪಡೆಗೆ ಜಗ - ಮಂಕುತಿಮ್ಮ ॥ ೯೪೪ ॥

tamella hasivugaLa taNiyipa anitu anyOnya । hommuge audArya jana janapadangaLali ॥ bommanu ellaranu aaLvanu ihanenuva nenapinali । nemmadiya paDege jaga - Mankutimma ॥ 944 ॥

Meaning in Kannada

ಜಗತ್ತಿನ ಜನರೆಲ್ಲರ ಬಯಕೆಗಳನ್ನು ಈಡೇರಿಸಲು ಇರುವ ಜಗದ್ವಸ್ತುಗಳನ್ನು ಜಗತ್ತಿನ ಜನರೆಲ್ಲರೂ ಸೌಹಾರ್ಧತೆಯಿಂದ, ಔದಾರ್ಯದಿಂದ ಮತ್ತು ಅನ್ಯೋನ್ಯತೆಯಿಂದ ಹಂಚಿಕೊಂಡು ಬಾಳಲಿ. ಎಲ್ಲರನ್ನೂ ಕಾಯುವ ಪರಬ್ರಹ್ಮನೊಬ್ಬನಿರುವನು ಎಂದು ದೃಢವಾಗಿ ನಂಬಿ, ನೆಮ್ಮದಿಯನ್ನು ಈ ಜಗತ್ತು ಪಡೆಯಲಿ ಎಂದು ತುಂಬು ಹೃದಯದ ಆಶಯವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Let everybody and every nation develop habits of sharing so that all our hunger is satisfied by us giving to one another. Let us all remember at all times that God is watching over us. Let us find peace in such thoughts. - Mankutimma

Themes

DevotionPeace

Video Section

Video Coming Soon

Detailed video explanations by scholars and experts will be available soon.