Mankutimmana Kagga by D.V. Gundappa
ಬೇಡಿದುದನೀವನೀಶ್ವರನೆಂಬ ನೆಚ್ಚಿಲ್ಲ । ಬೇಡಲೊಳಿತಾವುದೆಂಬುದರರಿವುಮಿಲ್ಲ ॥ ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ । ನೀಡುಗೆದೆಗಟ್ಟಿಯನು - ಮಂಕುತಿಮ್ಮ ॥ ೯೪೩ ॥
bEDidudanu iivanu iishvaranemba nechchilla । bEDalu oLitAvudu embudara arivum illa ॥ kUDibandudane nIn avana ichChe endu koLe । nIDugedegaTTiyanu - Mankutimma ॥ 943 ॥
ನೀನು ಆ ಪರಮಾತ್ಮನಲ್ಲಿ ಬೇಡಿದುದನ್ನೆಲ್ಲಾ ನಿನಗವನು ಕೊಡುವನು ಎಂದು ನಂಬಿಕೆಯಿಲ್ಲ. ಅಷ್ಟೇ ಅಲ್ಲ ಅವನಲ್ಲಿ ಏನನ್ನು ಬೇಡಬೇಕು ಮತ್ತು ಏನನ್ನು ಬೇಡಬಾರದು ಎಂಬುದರ ಪ್ರಜ್ಞೆಯೂ ನಿನಗಿಲ್ಲ. ಹಾಗಿರುವಾಗ ಆಯಾ ಸಮಯಕ್ಕೆ ಸಿಕ್ಕದ್ದನ್ನು ಆ ಪರಮಾತ್ಮನೇ ಇತ್ತದ್ದೆಂದು ಅರಿತು, ನಂಬಿ ಹಾಗೆ ಬಂದದ್ದನ್ನು ಅನುಭವಿಸಲು ನಿನ್ನ ಎದೆಯನ್ನು ಗಟ್ಟಿಯಾಗಿಸಿಕೋ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.
There is no guarantee that God whom we believe in will grant all our wishes. Even if he did, we are not sure if what we wish is good for us. In such circumstances, it is best to assume that what ever happens is happening for good and is according to His will. Face all circumstances with a strong heart. - Mankutimma
Video Coming Soon
Detailed video explanations by scholars and experts will be available soon.