Back to List

Kagga 942 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹರಸುವುದದೇನ ನೀಂ? ವರವದೇನೆಂದರಿವೆ? । ಸರಿಯಿಂದು ತೋರುವುದು ನಾಳೆ ಸರಿಯಿಹುದೆ? ॥ ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? । ಅರಿವ ದೈವವೆ ಪೊರೆಗೆ - ಮಂಕುತಿಮ್ಮ ॥ ೯೪೨ ॥

harasuvudadEna nIm? varavadEnu andarive? । sari indu tOruvudu nALe sariyahude? ॥ nirukisuvudentu chira kAlada oLLitanu indu? । ariva daivave porege - Mankutimma ॥ 942 ॥

Meaning in Kannada

ಮತ್ತೊಬ್ಬರನ್ನು ಹರಸುವುದಾಗಲೀ ಅಥವಾ ತನಗಾಗಿ ಏನನ್ನಾದರೂ ಬೇಡುವುದಾಗಲೀ ಮಾಡಲು ನೀನು ಅದನ್ನು ಸರಿಯಾಗಿ ಅರಿತಿದ್ದೀಯೇನು? ಏಕೆಂದರೆ ಇಂದು ಸರಿಯೆನ್ನಿಸುವುದು, ಸದಾಕಾಲ ಸರಿಯಿರುತ್ತದೆ ಎಂದು ನಿನಗೆ ಗೊತ್ತಿದೆಯೇ? ಅಥವಾ ಏನನ್ನಾದರೂ ಬೇಡುವಾಗ ನಿನಗೆ ಸೂಕ್ತವಾದದ್ದನ್ನೇ ಬೇಡುತ್ತಿದ್ದೇನೆಂದು ನಿನಗೆ ಗೊತ್ತಿದೆಯೇ? ಹಾಗಿರಬೇಕಾದರೆ ಧೀರ್ಘಕಾಲದ ಹಿತವನ್ನು ಇಂದು ಬಯಸುವುದು ಹೇಗೆ ? ಆ ದೈವವೇ ಎಲ್ಲವನ್ನೂ ಅರಿತು ಪೊರೆಯುವುದುಂಟು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What can wish for? What can you ask God for? What is good today, can it be good tomorrow also? How can we now decide what ill be good for all times to come? Let us all surrender to the God who knows it all and not bother too much about future. - Mankutimma

Themes

DevotionDeathMorality

Video Section

Video Coming Soon

Detailed video explanations by scholars and experts will be available soon.