Mankutimmana Kagga by D.V. Gundappa
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ । ಇಂದು ನಂಬಿಹುದೆ ಮುಂದೆಂದುಮೆಂದಲ್ಲ ॥ ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು । ಇಂದಿಗೀ ಮತವುಚಿತ - ಮಂಕುತಿಮ್ಮ ॥ ೯೩೯ ॥
sandEhavu ii kRutiyoL innillavendu alla । indu nambihude mundendum endalla ॥ kundu tOrdandu adanu tiddikoLe manasunTu । indige ii matavu uchita - Mankutimma ॥ 939 ॥
ನಾನು ಬರೆದ ಈ ಕೃತಿಯಲ್ಲಿ ಇನ್ನು ‘ಸಂದೇಹವೇ ಇಲ್ಲ’ ಎಂದಲ್ಲ, ಇರಬಹುದು. ಇಂದು ನಾನು ನಂಬಿರುವ ವಿಷಯಗಳೇ ಮುಂದೆಯೂ ಎಂದೆಂದಿಗೂ ಅನ್ವಯ ಎಂದೂ ಅಲ್ಲ. ಯಾರಾದರೂ ನಾ ಬರೆದದ್ದರಲ್ಲಿ ಕೊರತೆ ಅಥವಾ ಕುಂದನ್ನು ತೋರಿದರೆ, ಅದನ್ನು ಒಪ್ಪಿಕೊಂಡು, ನಾನು ನನ್ನನ್ನು ತಿದ್ದಿಕೊಳ್ಳಲು ಸದಾ ಸಿದ್ಧ. ಆದರೆ ಇಂದು ನಾ ಬರೆದಿರುವುದುಇಂದಿಗೆ ಉಚಿತವೆನಿಸುತ್ತದೆ ಎಂದು, ಬಹಳ ವಿನಯವಾಗಿ, ವಿಶಾಲ ಮನೋಭಾವದಿಂದ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
It is not that after reading this book, there will be no more doubts. It is also not that what we believe today will hold up for ever. If someone points at some shortcoming, I have a open mind to correct. But for now, I believe this right. - Mankutimma
Video Coming Soon
Detailed video explanations by scholars and experts will be available soon.