Mankutimmana Kagga by D.V. Gundappa
ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ । ಅವನರಿವಿಗೆಟುಕುವವೊಲೊಂದಾತ್ಮನಯವ ॥ ಹವಣಿಸಿದನಿದನು ಪಾಮರಜನದ ಮಾತಿನಲಿ । ಕವನ ನೆನಪಿಗೆ ಸುಲಭ - ಮಂಕುತಿಮ್ಮ ॥ ೯೩೮ ॥
kaviyalla, vijnAniyalla, bari tArADi । avana arivige eTakuva vol ondu aatma nayava ॥ havaNisidanu idanu pAmarajanada mAtinali । kavana nenapige sulabha - Mankutimma ॥ 938 ॥
ನಾನು ಕವಿಯಲ್ಲ, ವಿಜ್ಞಾನಿಯೂ ಅಲ್ಲ, ಕೇವಲ ಅಲ್ಲಿಂದಿಲ್ಲಿಗೆ ತಾರಾಡುವವನು. ನನ್ನ ಅರಿವಿಗೆ ಎಟುಕಿದ್ದನ್ನು ಆತ್ಮದೊಂದಿಗೆ ಅನುನಯಿಸಿ ಸಾಮಾನ್ಯ ಜನರ ಮಾತಿನಲ್ಲಿ ಹೊಂದಿಸಿಬರೆದಿದ್ದೇನೆ. ಕವನ ನೆನಪಿಗೆ ಸುಲಭವೆಂದು ಇದನ್ನು ಪದ್ಯದ ರೂಪದಲ್ಲಿ ಬರೆದಿದ್ದೇನೆ, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
Not a poet, nor a scientist. He is just a common man. Within his limits, he has found something for his soul that he thinks is a suitable balance. With that he has strung this series of poems in common man's language. He chose poems because they are easy to remember. - Mankutimma
Video Coming Soon
Detailed video explanations by scholars and experts will be available soon.