Mankutimmana Kagga by D.V. Gundappa
ವ್ಯಾಕರಣ ಕಾವ್ಯ ಲಕ್ಷಣಗಳನು ಗಣಿಸದೆಯೆ । ಲೋಕತಾಪದಿ ಬೆಂದು ತಣಿಪನೆಳಸಿದವಂ ॥ ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು । ಸ್ವೀಕರಿಕೆ ಬೇಳ್ಪವರು - ಮಂಕುತಿಮ್ಮ ॥ ೯೪೦ ॥
vyAkaraNa kAvya lakShaNagaLanu gaNisadeye । lOkatApadi bendu taNipanu eLasidavam ॥ ii kanteyali tanna nambikeya neydihanu । svIkarike bELpavaru - Mankutimma ॥ 940 ॥
ವ್ಯಾಕರಣ ಮತ್ತು ಕಾವ್ಯ ಲಕ್ಷಣಗಳನ್ನಾವುದನ್ನೂ ಪರಿಗಣಿಸದೆ, ಬದುಕಿನ ಬೇಗೆಯಲ್ಲಿ ಬೆಂದು, ನೊಂದು, ಬವಣೆಯಿಂದ ಸಾಂತ್ವನವನ್ನು ಬಯಸಿದವನು, ಅದರಿಂದ ಪಡೆದ ರಸಾನುಭವವನ್ನು ಮತ್ತು ತಾನು ನಂಬಿದ ವಿಚಾರವನ್ನು, ಈ ‘ ಕಗ್ಗ’ ಎಂಬ ಕಂತೆಯಲ್ಲಿ ಹೆಣೆದಿಹನು. ಬೇಕಿದ್ದವರು ಸ್ವೀಕರಿಸಬಹುದು ಎಂದು, ನಿರ್ಲಿಪ್ತತೆಯ ಪರಮಾವಧಿಯನ್ನು ಮೆರೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
I have not paid too much attention to grammar and composition. This book has been written using experiences coming out of leading a tough life in this world. I have written what I have believed in. To accept it is left to the readers. - Mankutimma
Video Coming Soon
Detailed video explanations by scholars and experts will be available soon.