Mankutimmana Kagga by D.V. Gundappa
ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ । ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ॥ ಇಷ್ಟಷ್ಟು ನಿನ್ನೊಳ್ ಒಳಿತಿಳಿವಿಲ್ಲದಿರೆ ನಷ್ಟ । ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ॥ ೯೩೩ ॥
kaShTa jIvada pAka; kaShTa dharma vivEka । eShTeShTu nIti yuktigaLa bagedaDeyum ॥ iShTu aShTu ninnoL oLitu iLivilladire naShTa । dRuShTi sUkShmave gatiyo - Mankutimma ॥ 933 ॥
ಜೀವ ಪಕ್ವವಾಗುವುದು ಕಷ್ಟ. ಧರ್ಮದ ವಿವೇಕ ಬರುವುದೂ ಸಹ ಕಷ್ಟ. ಎಷ್ಟು ನೀತಿಕಥೆಗಳನ್ನು ಓದಿ, ಕೇಳಿ ಅರಿತುಕೊಂಡರೂ, ಅಂತರಂಗದಲ್ಲಿನ ವಿವೇಕ ಉದ್ದೀಪನವಾಗದಿದ್ದರೆ ಪ್ರಯೋಜನವಿಲ್ಲ. ಅವುಗಳನ್ನು ಅರಿಯಲು ಸೂಕ್ಷ್ಮ ದೃಷ್ಟಿಯಿರಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Life is hard. It is difficult to understand what is the right thing to do. One may have read and learnt about a thousand subtleties about morality and wisdom. But if not even a little soaks into his character, then it is all a waste. When it is not in one's character to be moral, the only way out is to brood over each decision carefully. - Mankutimma
Video Coming Soon
Detailed video explanations by scholars and experts will be available soon.