Back to List

Kagga 932 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮೋಹನಾನಂದಭೈರವಿ ಶಂಕರಾಭರಣ । ಶಾಹನ ಕುರಂಜಿ ಕೇದಾರ ಕಾಪಿಗಳ ॥ ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ । ಗಾಹಿಸದರೊಳಗೆ ನೀಂ - ಮಂಕುತಿಮ್ಮ ॥ ೯೩೨ ॥

mOhana aananda bhairavi shankarAbharaNa । shAhana kuranji kEdAra kApigaLa ॥ mOha sarvasvagaLa rAgAbdhiyo brahma । gAhisu adaroLage nIm - Mankutimma ॥ 932 ॥

Meaning in Kannada

ಮಾನ್ಯ ಗುಂಡಪ್ಪನವರು ಸಂಗೀತದಲ್ಲಿ ಬಹಳ ಆಸಕ್ತಿಯುಳ್ಳವರಾಗಿದ್ದರು, ಸ್ವತಃ ವಾಗ್ಗೇಯಕಾರರಾಗಿದ್ದರು ಮತ್ತು ಸಂಗೀತ ಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಹಾಗಾಗಿ ಅವರು ಏನೆನ್ನುತ್ತಾರೆ ನೋಡಿ!!!!! ‘ಮೋಹನ, ಆನಂದಭೈರವಿ, ಶಂಕರಾಭರಣ, ಶಾಹನ, ಕುರಂಜಿ, ಕೇದಾರ, ಕಾಪಿ’ ಗಳಂತಹ ರಾಗಗಳಲ್ಲಿ ಹೊರ ಹೊಮ್ಮುವ ಸಂಗೀತವು ಪರಬ್ರಹ್ಮನನ್ನು ಆರಾಧಿಸುವ ರಾಗಗಳ ಕಡಲು. ಆ ವಿಸ್ತಾರವಾದ ರಾಗಗಳ ಕಡಲಲ್ಲಿ ನೀನು ಮುಳುಗಿ ಲೀನವಾಗು ಎಂಬ, ಕಿವಿಮಾತನ್ನು ಹೇಳಿದ್ದಾರೆ ಈ ಮುಕ್ತಕದಲ್ಲಿ.

Meaning & Interpretation

Creator (and his creation) is like a ocean of mesmerizing music involving raagas like mohana, ananda bhairavi, shankarabharana, shaahana, kuranji, kedaara, kaapi. You soak it all in and drown in it. - Mankutimma

Themes

Nature

Video Section

Video Coming Soon

Detailed video explanations by scholars and experts will be available soon.