Mankutimmana Kagga by D.V. Gundappa
ವೇದಾಂತವಾಕ್ಯಗಳ ನಮಕಾನುವಾಕಗಳ । ಕೇದಾರಗೌಳ ಮಣಿರಂಗಾರಭಿಗಳ ॥ ನಾದಂಗಳಲಿ ಮನವ ಬೆರಸಿ ನೀನುತ್ಕ್ರಮಿಸೆ । ಸಾಧನವೊ ಮುಕ್ತಿಗದು - ಮಂಕುತಿಮ್ಮ ॥ ೯೩೧ ॥
vEdAnta vAkyagaLa namka anuvAkagaLa । kEdAra gauLa maNiranga aarabhigaLa ॥ nAdangaLali manava berasi nInu utkramise । sAdhanavo muktigadu - Mankutimma ॥ 931 ॥
ವೇದಾಂತದ ವಾಕ್ಯಗಳನ್ನು ಅಥವಾ ಉಪನಿಷತ್ತಿನ ಸಾರವನ್ನು ಸಾರುವ ವಾಕ್ಕುಗಳಲ್ಲಿ ಅಥವಾ ಕೇದಾರಗೌಳ, ಮಣಿರಂಗ ಅಥವಾ ಆರಭಿಯಂತಹ ಸಂಗೀತದ ರಾಗಗಳಲ್ಲಿನ ವಿಸ್ತಾರವನ್ನು ಕೇಳುತ್ತಾ ಅದರೊಳಗೆ ತಲ್ಲೀನನಾಗಿ ನೀನು ಈ ಜಗತ್ತನ್ನು ತೊರೆದರೆ, ಅದೇ ಮುಕ್ತಿಗೆ ಸಾಧನ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If you pass on while your mind is immersed in listening to the words from vedanta and other scriptutres like namaka and anuvaaka, songs sung in the ragas kedara, gauLa, maniranga and aarabhi - then it is a sure path to salvation (no re-births). - Mankutimma
Video Coming Soon
Detailed video explanations by scholars and experts will be available soon.