Mankutimmana Kagga by D.V. Gundappa
ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ । ಯಾರ ಭುಜಕಂ ನಿನ್ನ ಭಾರವಾಗಿಸದೆ ॥ ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ । ಪಾರಗಾಣಿಸ ಬೇಡು - ಮಂಕುತಿಮ್ಮ ॥ ೯೩೦ ॥
aara kaituttigam ninna kAyisade vidhi । yAra bhujakam ninna bhAravAgisade ॥ aara sele suLivum anTadavol aagisi ninna । pAragANisa bEDu - Mankutimma ॥ 930 ॥
"ಯಾರೋ ನೀಡುವ ಕೈ ತುತ್ತಿಗೆ ನಾನು ಕಾಯುವಂತಾಗದೆ, ಯಾರ ಭುಜಕ್ಕೂ ನಾನು ಹೊರೆಯಾಗದೆ, ಯಾರದೇ ಪ್ರೀತಿ, ಪ್ರೇಮ ಮತ್ತು ಮೋಹಗಳ ಸೆಳೆತಕ್ಕೆ ಅಂಟದಹಾಗೆ, ಈ ಜಗತ್ತಿನಿಂದ ನಿರ್ಗಮಿಸುವ ದಾರಿ ತೋರೋ " ಎಂದು ಪರಮಾತ್ಮನಲ್ಲಿ ಬೇಡು ಎಂದು, ತಮಗೇನು ಬೇಕೋ ಅದನ್ನು ಹೇಳುತ್ತಾ, ನೀವೂ ಸಹ ಅದನ್ನೇ ಬೇಡಿ ಪಡೆದುಕೊಳ್ಳಿ ಎಂದು ಆದೇಶಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
Pray for such a passing (death). Let you not have to wait for someone to hand feed you. Let you be never heavy for other's shoulders. Let no attachment bind you to them. - Mankutimma
Video Coming Soon
Detailed video explanations by scholars and experts will be available soon.