Mankutimmana Kagga by D.V. Gundappa
ನೂರಾರು ಮತವಿಹುದು ಲೋಕದುಗ್ರಾಣದಲಿ । ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥ ಸಾರದಡುಗೆಯನೊಳವಿಚಾರದೊಲೆಯಲಿ ಮಾಡು । ಬೇರೆ ಮತಿ ಬೇರೆ ಮತ - ಮಂಕುತಿಮ್ಮ ॥ ೯೩೪ ॥
nUrAru matavihudu lOkada ugrANadali । aarisiko ninna ruchige oppuvudanu adaroL ॥ sArada aDugeyanu oLa vichAradoleyali mADu । bEre mati bEre mata - Mankutimma ॥ 934 ॥
ಈ ಜಗತ್ತಿನಲ್ಲಿ ನೂರಾರು ಮತಗಳಿವೆ. ನಿನ್ನ ಮನಸ್ಸಿಗೆ ಇಷ್ಟವಾದ ಯಾವುದಾದರೊಂದು ಮತವನ್ನು ನೀನು ಆರಿಸಿಕೋ. ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ, ಎಂದರೆ ಅಭಿಪ್ರಾಯ ಹಾಗಿರುತ್ತದೆ, ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are hundreds of sects (religions) in this world. You are free to choose what ever you feel is true. Once you get the summary of what that religion is all about, you should contemplate on it - just like you make a dish after getting the ingredients. You will get your dish ready. Like that, every man's religion is his own. - Mankutimma
Video Coming Soon
Detailed video explanations by scholars and experts will be available soon.