Back to List

Kagga 917 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ । ನಗುವ ಕೇಳುತ ನಗುವುದತಿಶಯದ ಧರ್ಮ ॥ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ । ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ॥ ೯೧೭ ॥

naguvu sahajada dharma; nagisuvudu para dharma । naguva kELutta naguvudu atishayada dharma ॥ naguva nagisuva nagisi naguta bALuva varava । mige nInu bEDikoLo - Mankutimma ॥ 917 ॥

Meaning in Kannada

ನಗುವುದು ಮಾನವನ ಸಹಜವಾದ ಧರ್ಮ. ನಗಿಸುವುದು ನಾವು ಆಚರಿಸಬಹುದಾದ, ಪರಧರ್ಮ. ಮತ್ತೊಬ್ಬರ ನಗುವನ್ನು ಕೇಳುತ್ತಾ, ನಾವು ನಗುವುದು ಅತಿಶಯದ ಧರ್ಮ. ನಾವು ನಗುವ, ನಗಿಸುವ, ಮತ್ತೊಬ್ಬರನ್ನು ನಗಿಸುವಾಗ ನಾವೂ ನಗುವಂತಹ ಭಾವವಿರಲಿ ಎಂದು ಆ ವರವನ್ನು, ನೀನು ಅಧಿಕವಾಗಿ ಪರಮಾತ್ಮನಲ್ಲಿ ಬೇಡಿಕೊಳ್ಳು, ಎಂದು ಒಂದು ಅದ್ಭುತ ಸಂದೇಶವನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

To laugh(and be happy) is natural to all beings. To make another happy is a noble deed. Even better is being happy by seeing others happy. You must pray to God to make you happy, to give you ability to make others happy, to be happy by making others happy. That is the best boon you can ask for. - Mankutimma

Themes

DevotionSociety

Video Section

Video Coming Soon

Detailed video explanations by scholars and experts will be available soon.