Mankutimmana Kagga by D.V. Gundappa
ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? । ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ॥ ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? । ಇಮ್ಮಿದಳ ಸರಸವದು - ಮಂಕುತಿಮ್ಮ ॥ ೯೧೬ ॥
janma sAvira barali, naShTavu adarindEnu? । karma sAviravirali, kaShTa ninagEnu? ॥ brahma hRudayadi nille mAyeyu EngaidoDEm? । immidaLa sarasavadu - Mankutimma ॥ 916 ॥
ಸಾವಿರಾರು ಜನ್ಮಗಳು ಬರಲಿ, ಅದರಿಂದ ನಷ್ಟವೇನೂ ಇಲ್ಲ. ಆ ಜನ್ಮಗಳಲ್ಲಿ, ನಮ್ಮ ಕರ್ಮಗಳು ಸಾವಿರಾರು ಆಗಲಿ, ‘ಬ್ರಹ್ಮ’ ಹೃದಯದಲ್ಲಿ ಸ್ಥಿರವಾಗಿ ನಿಂತರೆ, ಅದನ್ನು ಅನುಭವಿಸಲು ನಮಗೇನು ಕಷ್ಟ? ಈ ಮಾಯೆಯೆಂಬ ಮೋಹಿನಿ ಎನು ಮಾಡಿದರೇನು? ಈ ಜಗತ್ತಿನ ಲೀಲಾ ವಿನೋದವನ್ನು, ಪ್ರೇಯಸಿಯ ಸರಸವೆಂಬಂತೆ ಬಗೆದು ಶಾಂತವಾಗಿ ಜೀವಿಸಬಹುದು ಎಂದು ಬದುಕಿನಲ್ಲಿ ಇದ್ದು, ಅದನ್ನು ಅನುಭವಿಸುತ್ತಾ ಇದ್ದರೂ, ನಿರ್ಲಿಪ್ತತೆಯ ಜೀವನದ ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
So what if you have to take thousands of births? What have you got to lose? So what if you have to do a lot of work (actions) in those lives? What is your difficulty? As long as God stays in your heart (you know the truth about God and creation), then why would you care about the illusions of this world created by Maya? All of them will be as simple as friendly banter with your wife. - Mankutimma
Video Coming Soon
Detailed video explanations by scholars and experts will be available soon.