Mankutimmana Kagga by D.V. Gundappa
ಬರಿಯ ಪೊಳ್ಳು ವಿಚಾರ ಮಾನುಷವ್ಯಾಪಾರ । ಪರಿಕಿಸಲು ಪುಣ್ಯವೆಂಬುದುಮಹಂಕಾರ ॥ ಅರಳಿ ಮೊಗವನಿತಿನಿತು, ನಕ್ಕು ನಗಿಸಿರೆ ಸಾರ । ಹೊರೆ ಮಿಕ್ಕ ಸಂಸಾರ - ಮಂಕುತಿಮ್ಮ ॥ ೯೧೫ ॥
bariya poLLu vichAra mAnuSha vyApAra । parikisalu puNyavembudum ahankAra ॥ araLi mogava anitinitu, nakku nagisire sAra । hore mikka samsAra - Mankutimma ॥ 915 ॥
ಈ ಜಗತ್ತಿನಲ್ಲಿ ಮನುಷ್ಯ ಮನುಷ್ಯರ ನಡುವೆ ನಡೆಯುವುದೆಲ್ಲಾ ಹುರುಳು-ತಿರುಳು ಇಲ್ಲದ ಪೊಳ್ಳುವಿಚಾರ. ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿದರೆ ಪುಣ್ಯವೆಂಬುದೂ ಸಹ ಅಹಂಕಾರದ ಮಾತು. ಮುಖವನ್ನು ಪ್ರಸನ್ನವಾಗಿಟ್ಟುಕೊಂಡು ತಾನೂ ನಕ್ಕು, ಇತರರನ್ನೂ ನಗಿಸಿದರೆ, ಬದುಕು ಸತ್ವಯುತವಾಗಿರುತ್ತದೆ. ಮಿಕ್ಕ ಸಂಸಾರವೆಲ್ಲ ಕೇವಲ ಭಾರವಾದ ಹೊರೆಯಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If you look closely, every think mankind does is a waste. There is no ever-lasting achievement. Then, what is the purpose of living. Some say that it is to accumulate as much good karma as possible. Even that seems wrong and leads to some pride and arrogance. If one smiles and makes others smile as much as possible, then there is some light moments on this life. Rest everything in this world is just a burden. - Mankutimma
Video Coming Soon
Detailed video explanations by scholars and experts will be available soon.