Back to List

Kagga 914 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ । ಕರಗಿಸದರಲಿ ನಿನ್ನ ಬೇರೆತನದರಿವ ॥ ಮರುತನುರುಬನು ತಾಳುತೇಳುತೋಲಾಡುತ್ತ । ವಿರಮಿಸಾ ಲೀಲೆಯಲಿ - ಮಂಕುತಿಮ್ಮ ॥ ೯೧೪ ॥

tereyAgu vishva jIvanada abdhiyali । karagisu adarali ninna bEretanada ariva ॥ marutana urubanu tALuta ELuta olADutta । viramisu aa lIleyali - Mankutimma ॥ 914 ॥

Meaning in Kannada

‘ ನಾನು ಬೇರೆ’ ಎನ್ನುವ ಭಾವವನ್ನು ತೊರೆದು, ಕಡಲಿನಲ್ಲಿ ಗಾಳಿಯ ಬೀಸುವಿಕೆಯಿಂದ, ಮೇಲೇಳುತಾ, ಬೀಳುತಾ ಕಡಲಲ್ಲಿ ಒಂದಾಗುವ ‘ ಅಲೆ’ಯಂತೆ ನೀನೂ ಸಹ ಈ ಜಗತ್ಸಾಗರದಲ್ಲಿ ಮತ್ತು ಪರಮಾತ್ಮನ ಲೀಲೆಯಲ್ಲಿ ಒಂದಾಗಿ ಬಾಳು, ಎಂದು ಆದೇಶವನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

Life in this world is like an ocean. You be a wave in it. Lose all thoughts of being different and separate in the ocean. Wind will be strong and toss you from side to side. Deal with it by floating, rising and just swaying along with it. Enjoy it and treat it like a sport you would be playing. - Mankutimma

Themes

LifeMoralityNature

Video Section

Video Coming Soon

Detailed video explanations by scholars and experts will be available soon.