Back to List

Kagga 913 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು । ಕತ್ತಲೆಯ ಮೊಡುಕು ಮೂಲೆಗಳ ಸೇರದಿರು ॥ ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ । ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ ॥ ೯೧೩ ॥

vistAradali bALu, vaishAlyadim bALu । kattaleya moDuku mUlegaLa sEradiru ॥ bhAskarana anugrahave nUtna jIvana sattva । mRutyu ninage alpateyo - Mankutimma ॥ 913 ॥

Meaning in Kannada

ವಿಸ್ತಾರದಲ್ಲಿ ಬಾಳು, ವೈಶಾಲ್ಯತೆಯಿಂದ ಬದುಕು, ಅಜ್ಞಾನದಿಂದ ಜಗತ್ತಿನ ಸಂಪರ್ಕ ತೊರೆದು ಮೂಲೆ ಸೇರದಿರು. ಬೆಳಕನ್ನೇ ತೋರುವ ಆ ಭಾಸ್ಕರನ ಅನುಗ್ರಹದಿಂದಲೇ ಈ ಜಗತ್ತಿನಲ್ಲಿ ಎಲ್ಲವೂ ನವನವೀನವಾಗಿ ಮತ್ತೆ ಬದುಕಿನ ಉತ್ಸಾಹವನ್ನು ತುಂಬಿಕೊಳ್ಳುತ್ತವೆ. ಒಂದು ವಿಸ್ತಾರವಾದ ಬದುಕಿನಲ್ಲಿ ‘ಸಾವು’ ಎನ್ನುವುದು ಒಂದು ತೀರ ‘ಗೌಣ’ ವಾದ ವಿಷಯ ಎಂಬುದನ್ನು ತಿಳಿ, ಎನ್ನುವ ಸಂದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Try to get as varied experience as possible. Learn about a lot of things in this world. Life magnanimously. Don't isolate yourself and live in dark corners and edges. Expose yourself to the world. The Sun will infuse freshness and life into this world. Be a part of it. When you do so, death will just be a small matter to you. - Mankutimma

Themes

LifeDeathSelfWar

Video Section

Video Coming Soon

Detailed video explanations by scholars and experts will be available soon.