Back to List

Kagga 912 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- । ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ॥ ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ । ಬಂಧು ಜೀವನ್ಮುಕ್ತ - ಮಂಕುತಿಮ್ಮ ॥ ೯೧೨ ॥

indriyagaLoLu bALi jIva pakvangoLLalu । indriyangaLa mIri mElEri jANinda ॥ indriyangaLanu aaLi lOkavam santayipa । bandhu jIvanmukta - Mankutimma ॥ 912 ॥

Meaning in Kannada

ಇಂದ್ರಿಯಗಳ ಅನುಭವಗಳನ್ನು ಪಡೆದು, ಬದುಕಿನ ಅನುಭವಗಳಿಂದ ಪಕ್ವವಾಗಿ, ಆ ಇಂದ್ರಿಯಗಳು ನೀಡುವ ಸುಖಗಳ ಅಪೇಕ್ಷೆಯನ್ನು ತೊರೆದು, ಅಂತರಂಗದಿಂದ ಬೆಳೆದು ಮೇಲೆ ಏರಿ, ಜಾಣತನದಿಂದ ಇಂದ್ರಿಯಗಳನ್ನು ಹತೋಟಿಗೆ ತಂದುಕೊಂಡು, ಅನ್ಯರ, ಎಂದರೆ ಇನ್ನೂ ಇಂದ್ರಿಯಗಳ ಸುಳಿಯಲ್ಲಿ ಇರುವವರನ್ನು ಸಂತೈಸುವ ಸ್ಥಿತಿಗೆ ತಲುಪಿದರೆ ಅವನೇ ‘ಜೀವನ್ಮುಕ್ತ ‘ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

One has to live in this world known to his senses and get all teh experiences he can. Then he has to reach out to (think about) entities that are extra sensory - God, Universe, etc.. Once he has a handle on that, then he can control his own senses and create happiness in this world. Such a wise person will attain salvation from the endless cycle of births. - Mankutimma

Themes

DevotionLifeDeathNature

Video Section

Video Coming Soon

Detailed video explanations by scholars and experts will be available soon.