Mankutimmana Kagga by D.V. Gundappa
ರಣದಿ ಬಿದ್ದಾ ನೈನ್ಯಪತಿ ಸಿಡ್ನಿಯುತ್ಕ್ರಮಣ- । ದೊಣಗುಬಾಯಿಗೆ ನೀರ್ನೊಡ್ಡಲ್ ಅದನವನು ॥ ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು । ತಣಿವನಾಂತುದ ನೆನೆಯೊ - ಮಂಕುತಿಮ್ಮ ॥ ೯೧೧ ॥
raNadi bidda aa sainya pati siDniya utkramaNada । oNagu bAyige nIran oDDal adanu avanu ॥ tanaginta kelada bhaTagadu salvudu endittu । taNivan aantuda neneyo - Mankutimma ॥ 911 ॥
ರಣರಂಗದಲ್ಲಿ ಬಿದ್ದ ಸೈನ್ಯಾಧಿಪತಿ ‘ಸಿಡ್ನಿ’ಗೆ ಬಾಯಾರಿದಾಗ, ಅವನ ಸೇವಕ ಅವನಿಗೆ ನೀರನ್ನು ನೀಡಲು ಬಂದಾಗ, ಅವನು ತನಗಿಂತ, ತನ್ನ ಕೈಕೆಳಗೆ ಹೋರಾಡುವ ಸಾಮಾನ್ಯ ಸೈನಿಕನಿಗೆ ಇನ್ನೂ ಹೆಚ್ಚು ಬಾಯಾರಿಕೆಯಾಗಿ ಅವನಿಗೆ ಆ ನೀರಿನ ಅವಶ್ಯಕತೆ ಇರಬಹುದೆಂದು, ಆ ನೀರನ್ನು ಅವನಿಗೆ ನೀಡಿ ಸಂತೋಷಪಡುತ್ತಾನೆ. ನೀನೂ ಸಹ ಆ ರೀತಿ ನೀಡಿ ಸಂತಸಪಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Sidney was a English Knight. He was injured badly in a battle against Spain. On his death bed, in spite of being very thirsty he refused to take water telling that another soldier lying next to him need it more than him. He derived satisfaction from the uncompromising practice of morality. Remember him and his acts. - Mankutimma [Translator's note: Read this for the account of Sir Philip Sidney: http://www.poetsgraves.co.uk/sidney.htm]
Video Coming Soon
Detailed video explanations by scholars and experts will be available soon.