Mankutimmana Kagga by D.V. Gundappa
ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು । ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ॥ ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ । ಸ್ವಾಮಿ ಲೋಕಕೆ ಯೋಗಿ - ಮಂಕುತಿಮ್ಮ ॥ ೯೧೦ ॥
sAmAnyaroL puTTi, sAmAnyaroL beLedu । bhUmipati paTTavanu jana tanage kaTTal ॥ sAmarthyadinda avaranu aaLda linkana nante । svAmi lOkake yOgi - Mankutimma ॥ 910 ॥
ಇಲ್ಲಿ ಮಾನ್ಯ ಗುಂಡಪ್ಪನವರು, ೧೮೬೧-೬೫ ರ ನಡುವೆ ಅಮೇರಿಕಾ ದೇಶದ ಅಧ್ಯಕ್ಷನಾಗಿದ್ದ ‘ಅಬ್ರಹಾಂ ಲಿಂಕನ್’ ನ ವಿಚಾರವನ್ನು ಉಲ್ಲೇಖಿಸುತ್ತಾ, ಹೇಗೆ ಅವನು ಸಾಮಾನ್ಯರಲ್ಲಿ ಹುಟ್ಟಿ, ಬೆಳದು ತನ್ನ ಸಾಮರ್ಥ್ಯ, ಸ್ವಾರ್ಥರಾಹಿತ್ಯ ಮತ್ತು ತ್ಯಾಗದಿಂದ, ಭೂಮಿಪತಿ ಪಟ್ಟವನ್ನು ಏರಿದ, ಎಂದು ಹೇಳುತ್ತಾ ಅಂತಹವರು ತಮ್ಮ ಯೋಗ್ಯತೆಯಿಂದ ಲೋಕಕ್ಕೆ ಸ್ವಾಮಿಯಂತಾಗುತ್ತಾರೆ ಎಂದು ಹೇಳುತ್ತಾರೆ.
He was born among he common. Grew up among the common. But then the people gave him the responsibility of the governing, he executed it very well - fair, just and courageously. Only a person with good morals like Lincoln (like a yogi) can become the king and rule the whole world. - Mankutimma
Video Coming Soon
Detailed video explanations by scholars and experts will be available soon.