Mankutimmana Kagga by D.V. Gundappa
ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ । ಜಗದುಣಿಸುಗಳನುಂಡು ಬೆಳೆದವಂ ತಾನೆ ॥ ಮಗುಗಳನು ಬೆಳೆಸುತ್ತ ಮೆನೆಯನಾಳುವವೋಲು । ಜಗವನಾಳ್ವನು ಜಾಣ - ಮಂಕುತಿಮ್ಮ ॥ ೯೦೯ ॥
maguvAgi bombegendattu piriyara kADi । jagada uNisugaLan unDu beLedavam tAne ॥ magugaLanu beLesutta maneyanu aaLuvavOlu । jagavanu aaLvanu jANa - Mankutimma ॥ 909 ॥
ಮಗುವಾಗಿದ್ದಾಗ ಬೊಂಬೆಗಾಗಿ, ಹಿರಿಯರನ್ನು ಕಾಡಿ, ಅತ್ತು, ಗೋಳಾಡಿ ಹಾಗೆ ಪಡೆದದ್ದನ್ನು, ಅನುಭವಿಸಿ, ಸಂತೋಷಪಟ್ಟು ಬೆಳೆದ ತಾನೇ , ಮಕ್ಕಳನ್ನು ಬೆಳೆಸುತ್ತಾ, ಮನೆಯಲ್ಲಿ ಹಿರಿಯನಾಗಿ, ಎಲ್ಲವನ್ನೂ ಆಳುವವನಂತೆ ಈ ಜಗತ್ತನ್ನು ಆಳುವವನು, ಜಾಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
When one is still a child, he would cry and pester the elders for a doll. In time, he grows up savoring all the worldly experiences and becomes wise and responsible. He will have his children to bring up - who will now cry and pester for dolls. He will handle them with a fatherly hat - doing what is best in the child's interest. If one also behaves the same way with the world (understanding and fatherly) then he is really wise. - Mankutimma
Video Coming Soon
Detailed video explanations by scholars and experts will be available soon.