Mankutimmana Kagga by D.V. Gundappa
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ । ಸುಮವಪ್ಪುದಂತೆ ಮರುವಗಲು ಮುಗುಳ್ದಂತು ॥ ಅಮಿತ ಪ್ರಪಂಚನಾಕುಂಚನಾವರ್ತನ । ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ॥ ೯೧ ॥
kamalavu udayadoLu araLi sanjeyali muguLAgi । sumavappudante maruvagalu muguLdantu ॥ amita prapanchana Akunchana Avartana । kramave vishva charitre - Mankutimma ॥ 91 ॥
ಕಮಲದ ಹೂ ಸೂರ್ಯನ ರಶ್ಮಿಗಳು ಸೋಕಿದೊಡನೆ ಅರಳಿ, ಮತ್ತೆ ಸಂಜೆಗೆ ಮೊಗ್ಗಾಗಿ ಮತ್ತೆ ಆ ಮೊಗ್ಗು ಮತ್ತೆ ಸೂರ್ಯನ ರಶ್ಮಿಯ ಸ್ಪರ್ಶದಿಂದ ಅರಳುವಂತೆ ಈ ಅನಂತ ಮತ್ತು ಅಮಿತವಾದ ಪ್ರಪಂಚವೂ ಸಹ ನಿರಂತರವಾಗಿ ಹರಡಿಕೊಳ್ಳುತ್ತಾ ಮತ್ತೆ ಸಂಕುಚಿತಗೊಳ್ಳುತ್ತಾ ಮತ್ತೆ ಮತ್ತೆ ಬಿರಿದುಕೊಳ್ಳುತ್ತಾ ಇದೆ ಎಂದು ಈ ಜಗತ್ತಿನ ವಿಸ್ತಾರತೆಯನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
A lotus blooms at sunrise and closes again in the evening. Next day it becomes a full flower again and smiles. The seems to be the order in the history of the universe - never ending cycle of expansion, contraction and reversal. - Mankutimma
Video Coming Soon
Detailed video explanations by scholars and experts will be available soon.