Back to List

Kagga 92 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎತ್ತಣಿನೊ ದೃಕ್ಷರಿಧಿಯಾಚೆಯಿಂದಲನಂತ । ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ॥ ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ । ನಿತ್ಯನಿತ್ಯವು ಜಗದಿ - ಮಂಕುತಿಮ್ಮ ॥ ೯೨ ॥

ettaNino dRuk sharadhiyAcheyindal ananta । sattva tere tereyAgi bIsi gUDhadali ॥ bittarisutihudu hosa hosatanavanu eDebiDade । nitya nityavu jagadi - Mankutimma ॥ 92 ॥

Meaning in Kannada

ನಮ್ಮ ದೃಷ್ಟಿಯ ಪರಿಧಿ ಆಚೆಗಿರುವ ಅನಂತ ವಿಶ್ವದಲ್ಲಿಯ ಯಾವುದೋ ಒಂದು ನಿಗೂಢ ಸತ್ವ ಅಂದರೆ ಒಂದು ಚೇತನ ಅಲೆ ಅಲೆಯಾಗಿ ಹರಿದು, ಹಳತನ್ನು ಮರೆಸಿ ಹೊಸತನ್ನು ಮತ್ತೆ ಮತ್ತೆ ನಿರಂತರವಾಗಿ ತರುತ್ತಿದೆ ಎಂದು ಈ ಜಗತ್ತಿನ “ಪ್ರಪಂಚನ ಮತ್ತು ಆಕುಂಚನ”ದ ತತ್ವವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

From some where beyond the infinite open oceans essence of the eternal truth are coming to us as waves secretly (discreetly). These waves are delivering new freshness to this world incessantly - day after day. - Mankutimma

Themes

WisdomLife

Video Section

Video Coming Soon

Detailed video explanations by scholars and experts will be available soon.