Back to List

Kagga 90 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? । ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ॥ ಆವುದೆಲರಿನ ನಿಲ್ಲದಲೆತಕ್ಕೆ ಪಡುಸೀಮೆ? । ಈ ವಿಶ್ವಕಥೆಯಂತು - ಮಂಕುತಿಮ್ಮ ॥ ೯೦ ॥

Avudu iruvikege Adi? endu sRuShTiya modalu? । Avudu abdhiya teregaLali moTTamodalu? ॥ Avudu elarina nillada aletakke paDusIme? । ee vishvakatheyantu - Mankutimma ॥ 90 ॥

Meaning in Kannada

ಈ ಜಗತ್ತಿನ ಇರುವಿಕೆಗೆ ಯಾವುದು ಮೊದಲು? ಈ ಸೃಷ್ಟಿಯ ಮೊದಲು ಎಂದು ಆಯ್ತು? ಸಮುದ್ರದ ಅಲೆಗಳಲ್ಲಿ ಮೊದಲ ಅಲೆ ಯಾವುದು. ನಿರಂತರ ನಿಲ್ಲದೆ ಬೀಸುವ ಗಾಳಿ, ಬೀಸಲು ಎಂದು ಮೊದಲಾಯ್ತು ಮತ್ತು ಅದರ ಎಲ್ಲೆಗಳು ಎಲ್ಲಿವೆ. ಈ ವಿಶ್ವ ಕಥೆ ಎಂತು ಎಂದು ಪ್ರಸ್ತಾಪಮಾಡುತ್ತಾರೆ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು. 

Meaning & Interpretation

What caused the beginning of this existence? When did this creation come into being? Which one of the waves of the sea is the first? Where does this seemingly endless flow of wind end? I wonder what might be the story of this world. - Mankutimma

Themes

LifeDeathNature

Video Section

Video Coming Soon

Detailed video explanations by scholars and experts will be available soon.