Mankutimmana Kagga by D.V. Gundappa
ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು । ಚಿತ್ತಶೋಧನೆ ಮತಿಚಮತ್ಕಾರವಲ್ಲ ॥ ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ । ಸಕ್ತಿಯಿಂ ಶುದ್ಧತೆಯೊ - ಮಂಕುತಿಮ್ಮ ॥ ೯೦೬ ॥
tattva sAkShAtkAra chitta shuddhiyin ahudu । chitta shOdhane mati chamatkAravalla ॥ bittarada lOka paripAkadim, satkarma । saktiyim shuddhateyo - Mankutimma ॥ 906 ॥
ತತ್ವದ ಅರಿವು ಕೇವಲ ಚಿತ್ತದ ಶುದ್ಧಿಯಿಂದ ಆಗುತ್ತದೆ. ಚಿತ್ತದಲ್ಲಿನ ಕಶ್ಮಲಗಳನ್ನು ತೆಗೆಯುವುದು ಕೇವಲ ಬುದ್ಧಿವಂತಿಕೆಯ ಕೆಲಸವಲ್ಲ. ಆಸಕ್ತಿಯಿಂದ ಸತ್ಕರ್ಮಗಳನ್ನು ಮಾಡುತ್ತಾ ಬದುಕಿನ ಅನುಭವವನ್ನು ಪಡೆದು ಮತ್ತು ಆ ಅನುಭವದ ಸಾರವನ್ನು ಅಂತರಂಗಕ್ಕೆ ‘ಪಾಕ’ದಂತೆ ಇಳಿಸಿಕೊಂಡಾಗ, ಚಿತ್ತದ ಶುದ್ಧತೆ ಸಿದ್ಧಿಸುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Realization of the ultimate truth is not possible unless you mind is pure. Cleaning one's mind is a not a magic (trick) known to the intellect. One must learn a lot from the world around him, live life doing good deeds - that will give a strength that can make (and keep) the mind pure. - Mankutimma
Video Coming Soon
Detailed video explanations by scholars and experts will be available soon.