Back to List

Kagga 907 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ । ಮನದ ಶಿಕ್ಷೆ ಲೋಕ, ಮಮಕಾರಕಲ್ಲ ॥ ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ । ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ॥ ೯೦೭ ॥

tanurujege pathyAnna, bAya chapalakkalla । manada shikShe lOka, mamakArakalla ॥ guNacharye vishvasamarasake, kAmitakalla । munivRutti sUtravidu - Mankutimma ॥ 907 ॥

Meaning in Kannada

ದೇಹದ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಪಥ್ಯದ ಆಹಾರ, ನಮ್ಮ ಬಾಯಿ ಚಪಲವನ್ನು ತೀರಿಸಲು ಅಲ್ಲ. ಈ ಲೋಕದ ಬದುಕು ನಮಗೆ ಜೀವನದಲ್ಲಿ ಪಾಠ ಕಲಿಸಲಿಕ್ಕಾಗಿಯೇ ಹೊರತು, ಮಮಕಾರವನ್ನು ಬೆಳೆಸಿಕೊಳ್ಳಲು ಅಲ್ಲ. ನಮ್ಮ ಗುಣ ಮತ್ತು ನಮ್ಮ ನಡವಳಿಕೆ, ಜಗತ್ತಿನಲ್ಲಿ ನಮ್ಮನ್ನು ಸಮರಸದೊಂದಿಗೆ ಬದುಕಲೇ ವಿನಃ, ನಮ್ಮ ಸ್ವಂತದ ಆಸೆಗಳನ್ನು ಈಡೇರಿಸಿಕೊಳ್ಳಲು ಅಲ್ಲ. ಹೀಗೆ ಬದುಕುವುದೇ ಋಷಿಗಳಂತೆ ಬದುಕುವುದಕ್ಕೆ ಸೂತ್ರ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

One must follow diet to keep in good health - not because one likes the diet menu. The world exists to punish the mind,not to be loved. One must possess laudable qualities to preserve order in this world, not to gain anything. These are a code a sage has to live by. - Mankutimma

Themes

LifeDeathMoralityLove

Video Section

Video Coming Soon

Detailed video explanations by scholars and experts will be available soon.