Back to List

Kagga 901 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ । ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ॥ ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ । ಮೌನವದು ಮಣ್ಕರಗಿ - ಮಂಕುತಿಮ್ಮ ॥ ೯೦೧ ॥

nAnu nAnE nAnu enutte kiri koDada nIr । gAna geyvudu hemmeyim kaDala maretu ॥ nUnadinda ella anuva abdhiyoLage adanu irise । maunavadu maN karagi - Mankutimma ॥ 901 ॥

Meaning in Kannada

ನೀರು ತುಂಬಿದ ಒಂದು ಚಿಕ್ಕ ಮಣ್ಣಿನ ಕೊಡ, ತನಗಿಂತ ಕೋಟ್ಯಾಂತರಪಟ್ಟು ಹಿರಿಯದಾದ, ಕಡಲನ್ನು ಮರೆತು, ‘ನಾನು’ ಎಂಬ ಭಾವದಿಂದ, ನಾನೇ ಎಲ್ಲವೂ, ಎನ್ನ ಬಿಟ್ಟರೆ ಬೇರಾವುದೂ ಇಲ್ಲವೆಂಬಂತಹ ಭಾವವನ್ನು ಬೀಗುತ್ತದೆ. ಆದರೆ ಆ ಕೊಡವನ್ನು ತೆಗೆದುಕೊಂಡು ಹೋಗಿ ಸಮುದ್ರದ ನೀರಿನಲ್ಲಿ ಮುಳುಗಿಸಿದರೆ ಆಗ ಆ ಕೊಡದ ನೀರು ಕಡಲ ನೀರಲ್ಲಿ ಸೇರಿ, ಆ ಕೊಡದ ಮಣ್ಣು ಕರಗಿ ಮೌನವಾಗಿ ‘ನಾನು’ ಎಂಬ ಭಾವವಿಲ್ಲದಂತಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The water in the little pot will make a lot of noise. It will sing merrily having forgotten about the ocean. The water of the ocean on the other hand will speak a lot by its silence. If you put the pot into the sea, the mud dissolves and the water from the pot will unite with water outside and become silent. - Mankutimma

Themes

MoralityNature

Video Section

Video Coming Soon

Detailed video explanations by scholars and experts will be available soon.