Mankutimmana Kagga by D.V. Gundappa
ಮಲಗಿದೋದುಗನ ಕೈಹೊತ್ತಿಗೆಯು ನಿದ್ದೆಯಲಿ । ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ॥ ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು । ಸಡಿಲುವುವು ಬಾಳ್ ಮಾಗೆ - ಮಂಕುತಿಮ್ಮ ॥ ೯೦೨ ॥
malagi Odugana kaihottigeyu niddeyali । kaLachi bILvudu; pakva phalavantu taruvim ॥ iLeya sambandhagaLu sankalpa niyamagaLu । saDiluvuvu bAL mAge - Mankutimma ॥ 902 ॥
ಕೈಯಲ್ಲಿ ಪುಸ್ತಕವನ್ನು ಹಿಡಿದು ಓದುತ್ತಾ ಮಲಗಿದವನಿಗೆ ನಿದ್ರೆ ಬಂದರೆ ಹೇಗೆ ಕೈಯಲ್ಲಿರುವ ಪುಸ್ತಕ ಜಾರಿ ಬೀಳುತ್ತದೆಯೋ ಹಾಗೆಯೇ, ಪಕ್ವವಾದ ಫಲವೂ ಮರದಿಂದ ಬೀಳುತ್ತದೆ. ಈ ಜಗತ್ತಿನ ಸಂಬಂಧಗಳು, ಸಂಕಲ್ಪಗಳು ಮತ್ತು ನಿಯಮಗಳೂ ಸಹ ನಾವು ಅಂತರಂಗದಲ್ಲಿ ಪಕ್ವವಾದಂತೆ ಸಡಿಲವಾಗುವುವು, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If a person lies down and reads a book, sleep will slowly take over and the book will slip from his hand. Similarly, when ripe a fruit shall fall down by itself. Just like that, when one accumulates enough experience in life he will drop all association with this world, the goals, the rules - everything will dissolve. - Mankutimma
Video Coming Soon
Detailed video explanations by scholars and experts will be available soon.