Mankutimmana Kagga by D.V. Gundappa
ಸುತ್ತ ಮುತ್ತಣ ಗಾಳಿಯಾವಗಂ ನಮ್ಮೊಡಲ- । ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ॥ ಬಿತ್ತರದ ಲೋಕಭಾರವನಾತ್ಮನರಿಯದಿರೆ । ಮುಕ್ತ ಲಕ್ಷಣವದುವೆ - ಮಂಕುತಿಮ್ಮ ॥ ೯೦೦ ॥
sutta muttaNa gALiyu aavagam nammoDalanu । ottidoDam aa horeya manasu kANadavOl ॥ bittarada lOkabhAravanu aatmanu ariyadire । mukta lakShaNavaduve - Mankutimma ॥ 900 ॥
ಸುತ್ತಲಿನ ಗಾಳಿ ನಮ್ಮ ದೇಹವನ್ನು ಯಾವಾಗಲೂ ಒತ್ತಿ ಹಿಡಿದ್ದರೂ, ಹೇಗೆ ಅದರ ಭಾರ ನಮ್ಮ ಮನಸ್ಸಿಗೆ ಭಾಸವಾಗುವುದಿಲ್ಲವೋ, ಹಾಗೆಯೇ ಈ ವಿಸ್ತಾರವಾದ ಲೋಕದ ಭಾರ ನಮ್ಮ ಆತ್ಮಕ್ಕೆ ಭಾಸವಾಗದಿದ್ದರೆ ಅದೇ ‘ಆತ್ಮ’ ದ ಮುಕ್ತ ಸ್ಥಿತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
"There is air around us exerting pressure on our bodies. But our mind does not take notice of this pressure. Just like that the day when our soul does not take notice of the pressure the rest of the world puts on us - we can call ourselves as liberated (attained salvation or nirvana)." - Mankutimma
Video Coming Soon
Detailed video explanations by scholars and experts will be available soon.