Back to List

Kagga 897 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? । ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ॥ ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು । ಶೂನ್ಯವಾದವೆ ಶೂನ್ಯ - ಮಂಕುತಿಮ್ಮ ॥ ೮೯೭ ॥

shUnyavellavum emboDe antenisuvudu adEnu? । anyavilla enuva arivu adondirpudalte? ॥ chinmayavanu adane nIm satyavendu aashrayisu । shUnyavAdave shUnya - Mankutimma ॥ 897 ॥

Meaning in Kannada

ದೇವರಿಲ್ಲ, ಎಲ್ಲವೂ ಶೂನ್ಯ ಎಂದು ನೀನು ಹೇಳುವುದಾದರೆ, ಹಾಗೆ ಹೇಳುವುದಕ್ಕೆ, ನಿನಗೆ, ಆ ಅರಿವಿಲ್ಲದೆ, ಹೇಗೆ ಅನಿಸುತ್ತದೆ?. ದೇವರು ಇಲ್ಲ ಎಂದು ಹೇಳುವ ಅರಿವಾದರೂ ಅಲ್ಲಿ ಇದೆಯಲ್ಲ. ಆ ಅರಿವೇ ಸತ್ವ, ಚಿನ್ಮಯ ಸ್ವರೂಪವಾದ ಪರಮಾತ್ಮ. ಹಾಗಾಗಿ ನೀನು ಅದನ್ನು ಆಶ್ರಯಿಸು. ಶೂನ್ಯ ಎಂದು ಹೇಳಲು ಒಂದು ವ್ಯಕ್ತಿ ಮತ್ತು ಶೂನ್ಯವೆಂದು ಹೇಳುವ ಅರಿವು, ಎಂದರೆ ಜ್ಞಾನವು, ಇದೆಯಾದ್ದರಿಂದ ಶೂನ್ಯವಾದವೇ, ‘ಶೂನ್ಯ’ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"There is a school of thought that proposes that nothing exists. Existence is nothing but a big zero. But what is that one can feel to be existing? If not anything, there is at least the feeling that nothing else exists. That feeling is at least very real. That is just a thought. You should consider it as the truth and surrender to it. In reality, the zero existence logic itself is a big zero." - Mankutimma

Themes

WisdomLifeDeathSelfLove

Video Section

Video Coming Soon

Detailed video explanations by scholars and experts will be available soon.