Mankutimmana Kagga by D.V. Gundappa
ನರನರೀ ಚಿತ್ರಗಳು, ನಾಟಕದ ಪಾತ್ರಗಳು । ಪರಿಪರಿಯ ವೇಷಗಳು, ವಿವಿಧ ಭಾಷೆಗಳು ॥ ಬರುತಿಹುವು, ಬೆರಗನರಸಿ ಮೆರೆಯುವುವು, ತೆರಳುವುವು । ಮೆರವಣಿಗೆಯೋ ಲೋಕ - ಮಂಕುತಿಮ್ಮ ॥ ೮೯೮ ॥
naranarI chitragaLu, nATakada pAtragaLu। paripariya vEShagaLu, vividha bhAShegaLu ॥ barutihuvu, beraganarasi mereyuvuvu, teraLuvuvu । meravaNigeyO lOka - Mankutimma ॥ 898 ॥
ಈ ಜಗತ್ತನ್ನು ಒಂದು ಮೆರವಣಿಗೆ ಎಂದು ಹೇಳಿ, ಈ ಮೆರವಣಿಗೆಯಲ್ಲಿರುವುದು, ಪ್ರಕೃತಿ ಮತ್ತು ಪುರುಷರ ಚಿತ್ರಗಳು, ಕೇವಲ ನಾಟಕಕದ ಪಾತ್ರಗಳಂತೆ ಇವೆ, ಇವು ಆಡುವ ಭಾಷೆಗಳು ಬೇರೆ ಬೇರೆ. ಇವರು ತೊಡುವ ವೇಷಗಳು ಪರಿಪರಿಯಾದದ್ದು. ಈ ಪಾತ್ರಗಳು ಬರುತ್ತವೆ, ಆ ಪಾತ್ರದಲ್ಲಿ ಮೆರೆಯುತ್ತವೆ ಮತ್ತು ನೇಪತ್ಯಕ್ಕೆ ಸರಿದು ಹೋಗುತ್ತವೆ. ಪರಮಾತ್ಮ ಸೃಷ್ಟಿಯಾದ ಈ ಲೋಕ ಒಂದು ಮೆರವಣಿಗೆಯಂತೆ ಅನಿಸುತ್ತದೆ ಎಂದು, ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"This world is a procession. There are pictures of people and foxes. There are characters of a play. Various kinds of dresses, various languages. The come in search of excitement, rejoice and leave. This world is a wonderful procession." - Mankutimma
Video Coming Soon
Detailed video explanations by scholars and experts will be available soon.