Back to List

Kagga 896 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? । ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ॥ ಜಾತಿ ನೀತಿ ಸಮಾಜ ವರ್ಗ ಭೇದದಿನೇನು? । ಘಾತಿಯಿಲ್ಲಾತ್ಮಂಗೆ - ಮಂಕುತಿಮ್ಮ ॥ ೮೯೬ ॥

bhauta vijnAna vivaragaLin Enu aatmange? । prEta prayANa katheyu entirdoDe Enu? ॥ jAti nIti samAja varga bhEdadin Enu? । ghAtiyilla aatmange - Mankutimma ॥ 896 ॥

Meaning in Kannada

ಭೌತ ವಿಜ್ಞಾನದ ವಿವರಗಳಿಂದ ಆತ್ಮನಿಗೇನಾಗಬೇಕಾಗಿದೆ? ಆತ್ಮ, ಈ ದೇಹವನ್ನು ಬಿಟ್ಟಮೇಲೆ ಏನಾಗುವುದು ಎನ್ನುವ ವಿಚಾರ ಹೇಗಿದ್ದರೇನು?ಅದರಿಂದ ಆತ್ಮಕ್ಕೇನು? ಜಾತಿ, ನೀತಿ, ಸಮಾಜ ಮತ್ತು ವರ್ಗ ಭೇಧದಿಂದ ಅದಕ್ಕೆ ಏನಾಗಬೇಕು? ಇವಾವುಗಳಿಂದಲೂ ಆತ್ಮನಿಗೆ ಯಾವ ರೀತಿಯ ಧಕ್ಕೆಯೂ ಉಂಟಾಗುವುದಿಲ್ಲ, ಎಂದು ಹೊರಗಿನ ರೂಪ ಮತ್ತು ಅದರೊಳಗಿರುವ ಚೇತನದ ವಿಷಯಗಳನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"What has the soul got to do with the details of physical science? What does one have to do with different stories about the afterlife? What has one got to do with all the divisions in the society based on caste, morality and other social norms? The soul is not hurt by any of these. It remains pure and untouched by anything that is temporary." - Mankutimma

Themes

LifeMoralitySociety

Video Section

Video Coming Soon

Detailed video explanations by scholars and experts will be available soon.