Mankutimmana Kagga by D.V. Gundappa
ಸಂಕೇತಭಾವಮಯ ಲೋಕಜೀವನದ ನಯ । ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ॥ ದಂಕಿತಂಗಳು ಪದಪದಾರ್ಥ ಸಂಬಂಧಗಳು । ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ॥ ೮೯೫ ॥
sankEta bhAvamaya lOkajIvanada naya । snkhye guNa hEtu kAryagaLa lakShaNadinda ॥ ankitangaLu pada padArtha sambandhagaLu । anke mIrdudu sattva - Mankutimma ॥ 895 ॥
ಈ ಲೋಕದ ಜೀವನ, ಸಂಕೇತ ಮತ್ತು ಭಾವಗಳಿಂದ ಕೂಡಿದೆ. ಸಂಖ್ಯೆ,ಗುಣ ಮತ್ತು ಕಾರ್ಯ ಲಕ್ಷಣಗಳಿಂದ ಪದಾರ್ಥಗಳ ಗುರುತು ಮತ್ತು ಅವುಗಳ ಪರಸ್ಪರ ಸಂಬಂಧಗಳಿರುತ್ತವೆ. ಆದರೆ ಇವುಗಳೆಲ್ಲಕ್ಕೂ ಆಧಾರವಾದ ಆ ಪರತತ್ವ, ಈ ಎಲ್ಲದರಿಂದ ಅತೀತವಾಗಿರುತ್ತದೆ, ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"In this worldly existence, feelings and names are important. These have origins in numbers, qualities, actions or other characteristics. They form the link between the object and the name it is known by. But the real existence (of the object) is beyond the measuring scale or the name it gets because of it." - Mankutimma
Video Coming Soon
Detailed video explanations by scholars and experts will be available soon.