Back to List

Kagga 894 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ । ಮಾನಗಣಿತವು ನಮಗೆ? ಭಾನುವಿರದೊಡದೇಂ? ॥ ಅನಂತ್ಯ, ಶುದ್ಧಸತ್ತಾ ಮಾತ್ರ, ಬೊಮ್ಮನದು । ಲೀನನಾಗದರೊಳಗೆ - ಮಂಕುತಿಮ್ಮ ॥ ೮೯೪ ॥

bhAnu udaya astagaLin alte dikku kAlagaLa । mAna gaNitavu namage? bhAnuviradoDe adEm? ॥ anantya, shuddha sattA mAtra, bommanadu । lInanAgu adaroLage - Mankutimma ॥ 894 ॥

Meaning in Kannada

ಸೂರ್ಯನ ಉದಯ ಮತ್ತು ಮುಳುಗುವಿಕೆಯಿಂದ, ದಿಕ್ಕುಗಳ ಅಳತೆ ಮತ್ತು ಕಾಲದ ಲೆಕ್ಕಾಚಾರವನ್ನು ನಾವು ಮಾಡುತ್ತೇವೆ. ಸೂರ್ಯನೇ ಇಲ್ಲದೆ ಇದ್ದಿದ್ದರೆ? ಆಗ ಅನಂತವಾದ ಪರಬ್ರಹ್ಮನ ಶುದ್ಧ ಸತ್ವ ಎಲ್ಲೆಡೆಯಲ್ಲೂ ಕಾಣುತ್ತದೆ. ಅಂತಹ ಶುದ್ಧ ಸತ್ವದಲ್ಲಿ ಲೀನವಾಗು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"The rise and setting of the Sun is what gives us a scale to measure time and direction (space). Right? What if there was no Sun? All sense of time and direction will fall apart. What then remains is the endless, pure truth of the Creator that has no dependence on time or space. You should shed all feelings that are based on partial truths and dissolve in that supreme pure truth." - Mankutimma

Themes

WisdomDeathMoralityLove

Video Section

Video Coming Soon

Detailed video explanations by scholars and experts will be available soon.