Mankutimmana Kagga by D.V. Gundappa
ಸ್ವಪ್ನಲೋಕವ ಜಾಗೃತಂ ಸುಳ್ಳೆನುವನಲ್ತೆ? । ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ॥ ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- । ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ॥ ೮೯೩ ॥
svapna lOkava jAgRutam suLLenuvanu alte?। suptange jAgRutana lOkamum suLLE ॥ svapna jAgrata suptigala hinde nirlipta । gupta aatmanihudu diTa - Mankutimma ॥ 893 ॥
ಸ್ವಪ್ನ ಲೋಕವನ್ನು ಜಾಗೃತನು ಸುಳ್ಳು ಎನ್ನುವಂತೆ, ಮಲಗಿ ನಿದ್ರಿಸುವವನಿಗೆ ಜಾಗೃತನ ಲೋಕವೂ ಸುಳ್ಳೆನಿಸುತ್ತದೆ. ಈ ಜಾಗೃತ, ಸ್ವಪ್ನ ಮತ್ತು ಸುಪ್ತ, ಅವಸ್ಥೆಗಳಿಗೆ ಅತೀತವಾದ ಮತ್ತು ಈ ಅವಸ್ಥೆಗಳ ಪ್ರಭಾವಕ್ಕೊಳಗಾಗದ,ಎಂದರೆ ನಿರ್ಲಿಪ್ತ ಸ್ಥಿತಿಯಲ್ಲಿ, ಗೂಢವಾಗಿ ‘ಆತ್ಮ’ವಿರುವುದು ದಿಟ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"When awake one will always say that the dream land is untrue. Right? Similarly, for a person sleeping - the wakeful world is also untrue. But it is certain that behind the sleeping, alert and the dreaming selfs of a person there is a hidden soul who observes all these and is not influenced by any of these." - Mankutimma
Video Coming Soon
Detailed video explanations by scholars and experts will be available soon.