Back to List

Kagga 892 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ । ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ॥ ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ । ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ॥ ೮೯೨ ॥

horage, vishvadin aache, dUradali, nIladali । oLage, hRut kUpada aaLadali, masakinali ॥ nelegaLu intu eraDu mUla rahasyake avugaLa uli । kaletandu nIm jnAni - Mankutimma ॥ 892 ॥

Meaning in Kannada

ಹೊರಗೆ, ಎಂದರೆ ಈ ಜಗತ್ತಿನ ಪರಿಧಿಯಿಂದ ಆಚೆ, ದೂರದಲಿ, ಗಗನದಲ್ಲಿರುವ ರಹಸ್ಯಶಕ್ತಿ ಮತ್ತು ಒಳಗೆ, ಎಂದರೆ ಹೃದಯಾಂತರಾಳದಲಿ, ಮಸುಕುಮಸುಕಾಗಿರುವ ನಮ್ಮ ಆತ್ಮ ಶಕ್ತಿ ಎರಡೂ ಕಲೆತು ಒಂದಾದಾಗ ನಮಗೆ ಜ್ಞಾನವುಂಟಾಗುತ್ತದೆ, ಮತ್ತು ನಾವು ಜ್ಞಾನಿಗಳಾಗುತ್ತೇವೆ ಎಂದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

Meaning & Interpretation

"There are two sources of the universal truth. One is outside, beyond this universe, far away, in the blue of the sky. The other is inside, in the greatest depth of the heart (mind) and hidden. Both of them are telling the same things. When you can listen to them both and reconcile, you will be an enlightened soul." - Mankutimma

Themes

WisdomNatureLove

Video Section

Video Coming Soon

Detailed video explanations by scholars and experts will be available soon.