Back to List

Kagga 891 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು । ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ॥ ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು । ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ ॥ ೮೯೧ ॥

ninna kahi sihiyella kaDaloLu uppAguvudu । ninnella guNagaLum brahmadoLu antu ॥ puNyavO, pApavO, ahitavO, hitavo adu । chennahudu bommanali - Mankutimma ॥ 891 ॥

Meaning in Kannada

ನದಿಯ ಸಿಹಿ ನೀರು ಹರಿದು ಕಡಲ ಸೇರಿದಾಗ ಉಪ್ಪಾಗುತ್ತದೆ. ಹಾಗೆಯೇ, ಬದುಕಿನಲ್ಲಿ ನೀನುಂಡ ಕಹಿ-ಸಿಹಿಗಳೆಲ್ಲವೂ ಪರಬ್ರಹ್ಮನಲ್ಲಿ ಲೀನವಾಗುತ್ತವೆ. ನೀನು ಮಾಡಿರುವ, ಪುಣ್ಯವೋ,ಪಾಪವೋ,ಅಹಿತವೋ, ಹಿತವೊ ಅದು ಅವನಲ್ಲಿ ಸೇರಿದಮೇಲೆ, ಅದ್ಯಾವುದೂ ಇಲ್ಲದೆ ಪರಬ್ರಹ್ಮನಲ್ಲಿ ಚೆನ್ನಾಗಿ ಸೇರಿಹೋಗುತ್ತದೆ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

"All your good and bad experiences (sweet and sour) will dissolve anonymously in the sea (salty). All your qualities are similarly neutralized when you go back to the creator. It may be good karma, bad karma, misery or happiness - all of them dissolve and look good when it is with the Creator (as whole, and not individual)." - Mankutimma

Themes

LifeMoralityFate

Video Section

Video Coming Soon

Detailed video explanations by scholars and experts will be available soon.