Mankutimmana Kagga by D.V. Gundappa
ನಶ್ವರಾಕೃತಿ ನಾಮಮಯ ವಿಶ್ವಾರ್ಧಿಯಿದು । ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ॥ ಪ್ರಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ । ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ॥ ೮೯೦ ॥
nashvara aakRuti nAmamaya vishva vArdhiyu idu । shAshvata brahmada uchChvAsa ghana bindu ॥ prashvasitada alegaLanepiDidu guriya aritu iije । vishva mUlAptiyala - Mankutimma ॥ 890 ॥
ಒಂದು ಶಾಶ್ವತ ಘನಬಿಂದುವಾದ ಆ ಪರಮಾತ್ಮನ ಉಸಿರಾಟದ ಉಚ್ವಾಸ, ನಿಶ್ವಾಸಗಳಂತಿರುವ ಮತ್ತು ಕಾಲಗತಿಯಲ್ಲಿ ಹೇಳ ಹೆಸರಿಲ್ಲದಂತೆಯೇ ಕಳೆದುಹೋಗುವ, ನಮ್ಮ ರೂಪ ಮತ್ತು ನಾಮಗಳಿಂದಲೇ ತುಂಬಿರುವುದು ಈ ಜಗತ್ತೆಂಬ ಕಡಲು. ಸಮುದ್ರದ ಉಸಿರಾಟದ ಉಚ್ವಾಸ ನಿಶ್ವಾಸದಂತಿರುವ, ಅದರ ಅಲೆಗಳನ್ನು ಹಿಡಿದು, ಎಂದರೆ ಗಮನಿಸಿದರೆ, ಅದರ ಮೂಲವಾದ ಕಡಲು ದೊರೆಯುವಂತೆ, ಈ ವಿಶ್ವದಲ್ಲಿರುವ, ನಮ್ಮ ರೂಪ ಮತ್ತು ನಾಮಗಳ ಮೂಲಕವೇ ವಿಶ್ವದ ಮೂಲವಾದ ಆ ಪರಮಾತ್ಮನನ್ನು ಅರಿತು, ಪಡೆಯಬಹುದು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"This world is a ever churning (changing) ocean of temporary forms and named objects. There are waves created by the exhalation of the Creator. If one can hold on to the waves and swim towards the center of the ripples, he will succeed in finding the secret of the universe." - Mankutimma
Video Coming Soon
Detailed video explanations by scholars and experts will be available soon.