Back to List

Kagga 889 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯದಲಿ । ಸಾಂತ ಲೋಕದ ಸೌಖ್ಯ, ಖಂಡಖಂಡವದು ॥ ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- । ಕಾಂತ ಪೂರ್ಣಾನಂದ - ಮಂಕುತಿಮ್ಮ ॥ ೮೮೯ ॥

bhrAntiyO sampUrNa sukhada aashe bAhyadali । sAnta lOkada saukhya, khanDa khanDavadu॥ svAntakRuShiyim brahmavIkShe labhisirdoDe । ekAnta pUrNaananda - Mankutimma ॥ 889 ॥

Meaning in Kannada

ಬಾಹ್ಯ ಬದುಕಿನಲ್ಲಿ ನಮಗೆ ಸಂಪೂರ್ಣ ಅಥವಾ ಪರಿಪೂರ್ಣ ಸುಖ ಸಿಗುತ್ತದೆ ಎನ್ನುವುದು ‘ಭ್ರಮೆ’. ಏಕೆಂದರೆ ಬಾಹ್ಯ ಸುಖಗಳೆಲ್ಲಾ ತುಂಡು ತುಂಡಾದದ್ದು. ಸ್ವಂತ ಪ್ರಯತ್ನದಿಂದ ಪರಬ್ರಹ್ಮವಸ್ತುವನ್ನು ನೋಡಲಾದರೆ ಅದು ನಮಗೆ ಸಿಗುವ ಪೂರ್ಣಾನಂದ, ಎಂದು ಸಂಪೂರ್ಣ ಆನಂದದ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"It is an illusion that one can find complete happiness in the external world. Happiness in this world always has an end. It comes in pieces (followed by pieces of grief). When one realizes the (gets the sight of) universal truth by his own efforts, then he will get a taste of complete happiness - that only he can enjoy." - Mankutimma

Themes

WisdomLifeDeath

Video Section

Video Coming Soon

Detailed video explanations by scholars and experts will be available soon.