Back to List

Kagga 888 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ । ಮುಕ್ತಿ ಸುಖವಾಂತರಿಕವದು ನಿರವಧಿಸುಖ ॥ ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? । ರಿಕ್ತ ಸುಖ ಭಾಹ್ಯ ಸುಖ - ಮಂಕುತಿಮ್ಮ ॥ ೮೮೮ ॥

vyakti mAtrada vibhava vishvAtmata anubhava । mukti sukhavu aantarikavadu niravadhi sukha ॥ bhAkta prapancha sukhaventu aparimitavu ahudu? । rikta sukha bAhya sukha - Mankutimma ॥ 888 ॥

Meaning in Kannada

ವಿಶ್ವಾತ್ಮಾನುಭವ ಎನ್ನುವುದು ವ್ಯಕ್ತಿಗತವಾದ ಅನುಭವ. ನಿರಂತರವಾದ ಆ ಆನಂದದ ಸ್ಥಿತಿ, ಕೇವಲ ಆಂತರಿಕ ಭಾವ. ಈ ಸ್ಥಿತಿ ಮುಕ್ತ ಸ್ಥಿತಿ. ಆದರೆ ಬಾಹ್ಯ ಪ್ರಪಂಚದ ವಿಷಯಗಳ ಮೇಲೆ ಅಧಾರಪಟ್ಟಿರುವ ಸುಖ, ಅಪರಿಮಿತ ಸುಖವಾಗಲು ಹೇಗೆ ಸಾಧ್ಯ? ಹಾಗೆ ಬಾಹ್ಯ ವಸ್ತು, ವಿಷಯ ಮತ್ತು ವ್ಯಕ್ತಿಗಳ ಮೇಲೆ ಆಧಾರಪಟ್ಟಿರುವ ಸುಖ ಕೇವಲ ತಾತ್ಕಾಲಿಕ ಮತ್ತು ಕೀಳುಮಟ್ಟದ ಸುಖ, ಎಂದು ಅಂತರಂಗದ ಅನುಭವದ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"The experience of realization of the universal soul is very personal. It can not be taught, learnt or described. The happiness so got is immense and infinite. How can any happiness got by worldly pleasures even match up? Any such happiness is finite and there will always be other pleasures that will give more happiness." - Mankutimma

Themes

Life

Video Section

Video Coming Soon

Detailed video explanations by scholars and experts will be available soon.