Back to List

Kagga 887 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ । ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ ॥ ನಿರತಿಶಯ ಸುಖವಲ್ಲಿ, ವಿಶ್ವಾತ್ಮ ವೀಕ್ಷೆಯಲಿ । ಪರಸತ್ತ್ವ ಶಾಂತಿಯಲಿ - ಮಂಕುತಿಮ್ಮ ॥ ೮೮೭ ॥

paripUrNa sukhavanu elasuvanu tannoLagaDege । tirugisali tanna dRuShTiyanu nirmaladim ॥ niratishaya sukhavalli, vishvAtma vIkSheyali । parasattva shAntiyali - Mankutimma ॥ 887 ॥

Meaning in Kannada

ಪರಿಪೂರ್ಣ ಸುಖವನ್ನು ಅರಸುವವನು ಮನಸ್ಸಿನಲ್ಲಿ ಕಶ್ಮಲರಹಿತನಾಗಿ, ಅಂತರ್ಮುಖಿಯಾದಾಗ ಅವನಿಗೆ ಅಲ್ಲಿ, ವಿಶ್ವಾತ್ಮಭಾವದಿಂದ, ಬೇಧಗಳು ನಶಿಸಿ, ಪರತತ್ವದ ಶಾಂತಿಯಲ್ಲಿ, ಅಲೌಕಿಕ ಆನಂದದ ಅನುಭವವಾಗುತ್ತದೆ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"If you are looking for absolute happiness, then you should turn your search inwards with pure intentions. There you can find happiness that can not bettered. You will have the soul of the universe in your sight and experience complete cosmic peace." - Mankutimma

Themes

LifeNatureWarPeace

Video Section

Video Coming Soon

Detailed video explanations by scholars and experts will be available soon.