Back to List

Kagga 886 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; । ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ॥ ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು । ವಿಶ್ವಪ್ರಗತಿಯಂತು - ಮಂಕುತಿಮ್ಮ ॥ ೮೮೬ ॥

ashvatthavu illi bADidoDEnu? chiguru alli; । nashvarate viTapa parNangaLali mAtra; ॥ shAshvatate runDa mUladali; paricharisadanu । vishva pragatiyantu - Mankutimma ॥ 886 ॥

Meaning in Kannada

ಅಶ್ವತ್ಥ ವೃಕ್ಷವು, ಒಂದುಕಡೆ ಬಾಡಿದರೆ ಮತ್ತೊಂದು ಕಡೆ ಚಿಗುರುವುದು. ಹಾಗೆ ಬಾಡುವುದು, ಕೇವಲ ಕೊಂಬೆಗಳು ಮತ್ತು ಅದರ ಎಲೆಗಳು ಮಾತ್ರ. ಆದರೆ, ಅದರ ಕಾಂಡ ಮತ್ತು ಬೇರುಗಳು ಶಾಶ್ವತವಾಗಿರುತ್ತವೆ. ಹಾಗಾಗಿ ಅದನ್ನು ಉಪಚರಿಸಿದರೆ, ಆ ಮರವು ಹೇಗೆ ಶಾಶ್ವತವಾಗಿರುವುದೋ, ಹಾಗೆಯೇ ಒಂದು ಕಡೆ ಹಳತಾಗಿ ನಾಶವಾಗುತ್ತಿದ್ದರೆ, ಮತ್ತೊಂದು ಕಡೆ ಬೆಳೆಯುತ್ತಿರುವ ಈ ಜಗದ್ವೃಕ್ಷವನ್ನೂ, ಉಪಚರಿಸಿದರೆ, ಈ ವಿಶ್ವದ ಪ್ರಗತಿಯೂ ಸಹ ಇರುತ್ತದೆ ಎಂದು, ಜಗತ್ತಿನ ಜೀವನದ ಮತ್ತು ಅದರ ಪ್ರಗತಿಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.

Meaning & Interpretation

"The progress of this world is like that of the Holy Fig tree. A twig here, some leaves there will wilt and die. But there will be sprouts and fresh leaves elsewhere. The leaves twigs and branches are the only things that are temporary. The trunk and the roots are permanent. The world lives on - only parts of it flourish and perish in time." - Mankutimma

Themes

LifeDeathNatureDetachment

Video Section

Video Coming Soon

Detailed video explanations by scholars and experts will be available soon.