Mankutimmana Kagga by D.V. Gundappa
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ । ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ॥ ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ । ಆನಂದ ಧರೆಗಂದು - ಮಂಕುತಿಮ್ಮ ॥ ೮೮೫ ॥
jAnapada shiShTiyali, sampat samaShTiyali । jnAna sandhAnadali, maulya gaNaneyali ॥ mAnavate mAnuShya dhArmikateyu eddu nile । aananda dharegandu - Mankutimma ॥ 885 ॥
ಜನಪದದಲ್ಲಿ ಶಿಸ್ತನ್ನು ಪಾಲಿಸುವುದರಲ್ಲಿ, ಸಮುಷ್ಟಿಯ ಸಂಪತ್ತನ್ನು ಅನುಭವಿಸುವುದರಲ್ಲಿ, ಜ್ಞಾನದ ಅನುಸಂಧಾನದಲಿ, ಮೌಲಗಳ ಲೆಕ್ಕಾಚಾರದಲ್ಲಿ, ಮಾನವತೆಯೇ ಧರ್ಮವಾಗಿ, ಈ ಭುವಿಯಲ್ಲಿ ಸ್ಥಿರವಾಗಿ ಬೇರೂರಿದಾಗ, ಈ ಭುವಿಗೆ ಅಂದೇ ಆನಂದದ ದಿನ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು,ಈ ಮುಕ್ತಕದಲ್ಲಿ.
"In the discipline of the society, in the way wealth gets distributed, in the way people learn (accumulate knowledge), in the way people evaluate qualities - if there is human values, compassion and morality; then there will be ubiquitous happiness in this world." - Mankutimma
Video Coming Soon
Detailed video explanations by scholars and experts will be available soon.