Mankutimmana Kagga by D.V. Gundappa
ಮಿತಿಯನರಿತಾಶೆ, ಸಮುಚಿತವ ಮರೆಯದ ಯತ್ನ । ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ॥ ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು । ಹಿತಗಳಿವು ನರಕುಲಕೆ - ಮಂಕುತಿಮ್ಮ ॥ ೮೮೧ ॥
mitiyanu arita aashe, samuchitava mareyada yatna । taitikShe kaShTAmshada parihAryatege ॥ mRutiye jIvanakatheya koneyallavemba arivu । hitagaLu ivu narakulake - Mankutimma ॥ 881 ॥
ನಮ್ಮ ಮಿತಿಗಳನ್ನು ಅರಿತು ಆಸೆಪಡುವುದು, ಸೂಕ್ತತೆಯನ್ನು ಮರೆಯದ ಪ್ರಯತ್ನ, ಕಷ್ಟಗಳು ಪರಿಹಾರವಾಗದಿದ್ದರೆ, ಅದನ್ನು ತಡೆದುಕೊಳ್ಳುವ ತಾಳ್ಮೆ, ಮರಣವೇ ನಮ್ಮ ಜೀವನದ ಕಥೆಗೆ ಅಂತ್ಯವಲ್ಲ ಎಂಬ ಅರಿವು ಇದ್ದರೆ, ಅಂತಹ ಅರಿವು ಮಾನವ ಕುಲಕ್ಕೆ ಹಿತವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
"These are the sources of happiness for the mankind - desire that knows one's bounds, efforts that always keep the propriety of Dharma in mind, patience till difficult times pass, knowledge that death is not the end of everything." - Mankutimma
Video Coming Soon
Detailed video explanations by scholars and experts will be available soon.