Back to List

Kagga 882 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ । ಸರ್ವದಣು ತಾನೆನುತ್ತೋರೊರ್ವ ಮನುಜನ್ ॥ ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ । ಪರ್ವವಂದಿಳೆಗೆಲವೊ - ಮಂಕುತಿಮ್ಮ ॥ ೮೮೨ ॥

sarvArtha sahabhAgitege rAShTra kula varga । sarvada aNu tAn enutta Orvorva manujan ॥ sarvajIva samRuddhige anugUDi duDiyutire । parvavandu iLege elavo - Mankutimma ॥ 882 ॥

Meaning in Kannada

ರಾಷ್ಟ್ರ, ಕುಲ,ವರ್ಗ ಇತ್ಯಾದಿ ವಿಭಾಗಗಳು, ಮಾನವರು ಸಹಜೀವನವನ್ನು ಮಾಡಲು ಅನುಕೂಲವಾಗುವಂತೆ ಇವೆ. ಪ್ರತಿಯೊಬ್ಬ ಮನುಷ್ಯನೂ, ತಾನು ಸರ್ವದಲ್ಲಿ ‘ಅಣು’ಮಾತ್ರ ಎಂದು ಬಗೆದು, ಸರ್ವರ ಜೀವನದ ಸಂವೃದ್ಧಿಗೆ ಕೃಷಿಮಾಡಿದ ದಿನ, ಈ ಜಗತ್ತಿಗೆ ‘ಪರ್ವ’ದಿನ ಅಥವಾ ಸಂಭ್ರಮದ ದಿನ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

"The goal of making nations, races and sects is to aid sharing and caring for each other. Each man must realize that he is just an atom (cell) of the whole. He must work towards the overall well being of the whole. Only then, the world will look beautiful - like a festival day." - Mankutimma

Themes

WisdomLifeWarDuty

Video Section

Video Coming Soon

Detailed video explanations by scholars and experts will be available soon.