Back to List

Kagga 880 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತನ್ನ ಮನೋರಥಂಗಳ ಚಕ್ರವೇಗದಿನೆ । ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ॥ ತನ್ನ ಸಂಕಲ್ಪ ವಿಪರೀತದಿನೆ ಮಾನವನ । ಬೆನ್ನು ಮುರಿದೀತೇನೊ! - ಮಂಕುತಿಮ್ಮ ॥ ೮೮೦ ॥

tanna manOrathangaLa chakra vEgadine । tanna maNihAragaLa sikku bigitadinE ॥ tanna sankalpa viparItadine mAnavana । bennu muridItEno! - Mankutimma ॥ 880 ॥

Meaning in Kannada

ಸಾಧ್ಯಾಸಾಧ್ಯತೆಗಳ ವಿವೇಚನೆ ಇಲ್ಲದೆ, ಅತಿವೇಗವಾಗಿ ಓಡುವ ನಮ್ಮ ಮನಸ್ಸು, ಅತೀ ಉತ್ತಮವಾದ ಇಚ್ಚೆಗಳನ್ನೇ ಹಾರಗಳಂತೆ ತೊಟ್ಟು, ನಮ್ಮ ಕ್ಷಮತೆಗೂ ಮೀರಿದ ಮತ್ತು ವಿಪರೀತವಾದ ಕೆಲಸವನ್ನು ಸಾಧಿಸಲು ಪ್ರಯತ್ನಪಡುವ ನಾವು, ಆ ವಿಪರೀತ ಪ್ರಯತ್ನದಿಂದಲೇ ಪತನವಾಗುವ ಸಾಧ್ಯತೆ ಇದೆ, ಎನ್ನುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ.

Meaning & Interpretation

"Man is running fast in the cycle of desire-satisfaction-more-desires. During this, he may wear a necklace of pearls. While running fast, it may get entangled and suffocate him. His back may get broken under the weight of all the grand endeavors to satisfy his lofty ambitions." - Mankutimma

Themes

DeathPeace

Video Section

Video Coming Soon

Detailed video explanations by scholars and experts will be available soon.